alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರೂಪದ ಜೀವಿ ಸಾವಿಗೆ ಕಾರಣವಾಯ್ತು ಜನರ ಮೋಜಿನಾಟ

160218112944-dolphin-beach-death-argentina-picture-orig-vstop-dlewis-00000000-exlarge-169

ಕಡಲ ತೀರ ಕಂಡರೆ ಸಾಕು ಹೆಚ್ಚಿನ ಮಂದಿ ಮೈ ಚಳಿ ಬಿಟ್ಟು ಕುಣಿಯುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಕಡಲ ಕಿನಾರೆಯಲ್ಲಿ ಕಂಡಕಂಡಲ್ಲಿ ಸೆಲ್ಫಿ ಕ್ಲಿಕ್ಕಿಸುವವರ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಅರ್ಜೆಂಟೈನಾದ ಬೀಚೊಂದರಲ್ಲಿ ಜನರ ಸೆಲ್ಫಿಯ ಮೋಜಿನಾಟಕ್ಕೆ ಅಪರೂಪದ ಜೀವವೊಂದು ಬಲಿಯಾಗಿದೆ.

ಅರ್ಜೆಂಟೈನಾದ ಬೀಚೊಂದರಲ್ಲಿ ಜನ ಸಮುದ್ರದ ಹಿನ್ನೆಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಹೀಗೆ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಡಾಲ್ಫಿನ್ ಗಳನ್ನು ಕೂಗಿ ಕರೆಯುತ್ತಾರೆ. ಜನರ ಧ್ವನಿಗೆ ಸ್ಪಂದಿಸುವ ಡಾಲ್ಫಿನ್ ಗಳು ಹೊರಕ್ಕೆ ನೆಗೆಯುತ್ತವೆ. ಇವು ನೆಗೆದ ಸಂದರ್ಭದಲ್ಲಿ ಹಿನ್ನಲೆಯಾಗಿಸಿ ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಹೀಗೆ ಪದೇ ಪದೇ ಸೆಲ್ಫಿಗಾಗಿ ಡಾಲ್ಫಿನ್ ಕೂಗಿ ಕರೆದ ವೇಳೆ ಅಪರೂಪದ ಡಾಲ್ಫಿನ್ ನೀರಿನಿಂದ ಹೊರಕ್ಕೆ ಹಾರಿ ಬಂದಿದೆ. ಅದನ್ನು ಹಿಡಿದುಕೊಂಡ ಜನ ಕೈಯಿಂದ ಕೈಗೆ ವರ್ಗಾಯಿಸುತ್ತಾ ಫೋಟೋ ತೆಗೆದುಕೊಂಡಿದ್ದು, ಈ ಸಂದರ್ಭದಲ್ಲಿ ಡಾಲ್ಫಿನ್ ಸಾವನ್ನಪ್ಪಿದೆ.

ಹೌದು, ಅರ್ಜೆಂಟೈನಾದ ಬೀಚ್ ನಲ್ಲಿ ಕಾಣ ಸಿಗುವ ಅಪರೂಪದ ಲಾ ಪ್ಲಾಟಾ ಡಾಲ್ಫಿನ್ ಸೆಲ್ಫಿ ಹುಚ್ಚಿನಾಟಕ್ಕೆ ಸಾವನ್ನಪ್ಪಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಾ ಪ್ಲಾಟಾ ಡಾಲ್ಫಿನ್ ವಿಚಾರ ತೀವ್ರ ಚರ್ಚೆಯಾಗುತ್ತಿದ್ದು, ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪ್ರಾಣಿ ದಯಾ ಸಂಘಟನೆಯಿಂದಲೂ ಆಕ್ರೋಶ ವ್ಯಕ್ತಪಡಿಸಿದ್ದು, ಮೋಜಿನಾಟಕ್ಕೆ ಇಂತಹ ಮುಗ್ಧ ಜೀವಗಳನ್ನು ಬಲಿಕೊಡಬೇಡಿ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...