alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಣಲೆಯಿಂದ ಬೆಂಕಿಗೆ ಬೀಳೋದು ಅಂದ್ರೆ ಹೀಗೆ…!

ಪ್ಯಾರಿಸ್ ನ ಪರ್ಫೆರಿಕ್ ರಿಂಗ್ ರೋಡ್ ನಲ್ಲಿ ಕಾರು ಅಪಘಾತ ನಡೆಸಿ ಪರಾರಿಯಾಗೋಕೆ ಯತ್ನಿಸಿದ ವ್ಯಕ್ತಿಯೊಬ್ಬ ಗೂಢಚಾರಿಗಳ ಕೈಗೆ ಸಿಕ್ಕಿಬಿದ್ದು ನಂತರದಲ್ಲಿ ಪೊಲೀಸ್ ಠಾಣೆ ತಲುಪಿದ ವಿಚಿತ್ರ ಘಟನೆ ನಡೆದಿದೆ.

ಶುಕ್ರವಾರದಂದು ರಿಂಗ್ ರಸ್ತೆಯಲ್ಲಿ ಪೊಲೀಸರು ವಾಹನಗಳ ಡ್ರೈವಿಂಗ್ ಲೈಸೆನ್ಸ್ ಪರಿಶೀಲನೆ ನಡೆಸ್ತಿದ್ರು. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಪೊಲೀಸರನ್ನೇ ಏಮಾರಿಸಿ ಕಾರಿನ ಮೂಲಕ ಪರಾರಿಯಾಗಲು ಯತ್ನಿಸಿದ.

ಈ ವೇಳೆ ತಪ್ಪಾದ ಟರ್ನ್ ತೆಗೆದುಕೊಂಡು ಕಾರು ಚಲಾಯಿಸುತ್ತಿದ್ದ ಆತನನ್ನು ಪೊಲೀಸರು ಬಿಡದೆ ಬೆನ್ನಟ್ಟಿದ್ದರು. ಈ ವೇಳೆ ಆತ ಕಾರನ್ನು ಬಿಟ್ಟು ಪರಾರಿಯಾಗಿ ಫ್ರೆಂಚ್ ಗೂಢಚಾರಿಗಳ ಹೆಡ್ ಕ್ವಾಟ್ರಸ್ ನಲ್ಲಿ ಆಶ್ರಯ ಪಡೆದಿದ್ದ. ಪೊಲೀಸರಿಂದ ತಪ್ಪಿಸಿಕೊಂಡೇ ಅನ್ನೋ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.

ಆತ ಸಮಾಧಾನದಿಂದ ನಿಟ್ಟುಸಿರು ಬಿಡೋದ್ರ ಒಳಗೆ ಮತ್ತೊಂದು ಘಟನೆ ನಡೆದುಬಿಟ್ಟಿತ್ತು. ಗೂಢಚಾರಿಗಳು ಕೂಡಲೇ ಪೊಲೀಸರಿಗೆ ಈತನ ಬಗ್ಗೆ ಮಾಹಿತಿ ತಲುಪಿಸಿದ್ದಾರೆ. ಆನಂತರ ಸ್ಥಳಕ್ಕೆ ಬಂದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...