alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿತ್ತು 29 ಕೆಜಿ ಪ್ಲಾಸ್ಟಿಕ್

ನಾವು ಉಪಯೋಗಿಸುವ ಪ್ಲಾಸ್ಟಿಕ್ ನಿಸರ್ಗವನ್ನು ಹಾಳುಮಾಡುತ್ತದಲ್ಲದೇ, ಪ್ರಾಣವನ್ನೂ ಬಲಿತೆಗೆದುಕೊಳ್ಳುತ್ತದೆ. ಇತ್ತೀಚಿಗೆ ಪ್ಲಾಸ್ಟಿಕ್ ತಿಂದು ದನಕರುಗಳು ಸಾಯುವುದು ಕಾಮನ್ ಆಗಿಬಿಟ್ಟಿದೆ. ಆದರೆ ಇದೇ ಪ್ಲಾಸ್ಟಿಕ್ ಕಡಲಾಳದಲ್ಲಿರುವ ತಿಮಿಂಗಿಲವನ್ನೂ ಬಲಿ ಪಡೆದಿದೆ.

ಹೌದು ದಕ್ಷಿಣ ಸ್ಪೇನ್ ನ ಮುರ್ಶಿಯನ್ ಕಡಲ ತಡಿಯಲ್ಲಿ ಸತ್ತು ಬಿದ್ದಿರುವ ಬೃಹತ್ ಗಾತ್ರದ ತಿಮಿಂಗಿಲದ ಹೊಟ್ಟೆಯಲ್ಲಿ ಬರೋಬ್ಬರಿ 29 ಕೆಜಿಯಷ್ಟು ಪ್ಲಾಸ್ಟಿಕ್ ಇತ್ತು. ಬಹುತೇಕ ಪ್ಲಾಸ್ಟಿಕ್ ಬಾಟಲ್ ಗಳೇ ತುಂಬಿಹೋಗಿದ್ದ ತಿಮಿಂಗಿಲದ ಹೊಟ್ಟೆ ಗ್ಯಾಸ್ಟ್ರಿಕ್ ನಿಂದಾಗಿ ಉಬ್ಬಿ ಹೋಗಿತ್ತು. ಇಷ್ಟೆಲ್ಲ ಪ್ಲಾಸ್ಟಿಕ್ ಅನ್ನು ಜೀರ್ಣಮಾಡಿಕೊಳ್ಳುವ ಶಕ್ತಿಯಾಗಲಿ ಅಥವಾ ಅದನ್ನು ಹಾಗೆಯೇ ಹೊರಹಾಕುವ ಸಾಮರ್ಥ್ಯವಾಗಲಿ ಇಲ್ಲದಿರುವ ಈ ಸ್ಪರ್ಮ್ ತಿಮಿಂಗಿಲದ ಹೊಟ್ಟೆ ಉಬ್ಬಿಹೋಗಿತ್ತು. ಅಲ್ಲದೇ ಹೊಟ್ಟೆಯೊಳಗೆ ಸಾಕಷ್ಟು ಫಂಗಲ್ ಇನ್ಫೆಕ್ಷನ್ ಕೂಡ ಉಂಟಾಗಿತ್ತೆಂದು ವೈದ್ಯರು ತಿಳಿಸಿದ್ದಾರೆ.

ನಮ್ಮ ಪ್ಲಾಸ್ಟಿಕ್ ಮೋಹಕ್ಕೆ ಇನ್ನೆಷ್ಟು ಪ್ರಾಣಿಗಳು ಬಲಿಯಾಗಬೇಕೋ… ಇನ್ನಾದರೂ ಎಲ್ಲರೂ ಪ್ಲಾಸ್ಟಿಕ್ ವೇಸ್ಟ್ ಅನ್ನು ನೀರಿನಲ್ಲಿ ಹಾಕುವುದನ್ನು ನಿಲ್ಲಿಸಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...