alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿಂದ ಬಿಡುಗಡೆಯಾದ್ರೂ ಈತನ ಬೆನ್ನು ಬಿಡಲಿಲ್ಲ ಸಾವು

otto-frederick-warmbier_650x400_81497366096

ಒಟ್ಟೋ ವಾರ್ಮ್ಬಿಯರ್, ವರ್ಜೀನಿಯಾ ಯೂನಿವರ್ಸಿಟಿಯ ವಿದ್ಯಾರ್ಥಿ. ಸುಮಾರು ಒಂದೂವರೆ ವರ್ಷಗಳ ಹಿಂದೆ ಉತ್ತರ ಕೊರಿಯಾದಲ್ಲಿ ಈತನನ್ನು ಬಂಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬಳಿಕ ಈತ ಸಾವನ್ನಪ್ಪಿದ್ದಾನೆ. ಒಟ್ಟೋ, ಪ್ರವಾಸಕ್ಕೆ ಅಂತಾ ಉತ್ತರ ಕೊರಿಯಾಗೆ ತೆರಳಿದ್ದ.

ಅಲ್ಲಿಂದ ಹಾಂಗ್ ಕಾಂಗ್ ಗೆ ತೆರಳುತ್ತಿದ್ದ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಿನಾಕಾರಣ 15 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿ ಅಧಿಕಾರಿಗಳು ಆತನನ್ನು ವಿಪರೀತವಾಗಿ ಹಿಂಸಿಸಿದ್ರು. ಅದರಿಂದ ತೀವ್ರವಾಗಿ ಘಾಸಿಗೊಂಡಿದ್ದ ಒಟ್ಟೋ ಕೋಮಾಗೆ ಜಾರಿದ್ದ.

ಹೆತ್ತವರಿಗೂ ಆತನನ್ನು ಭೇಟಿಯಾಗಲು ಉತ್ತರ ಕೊರಿಯಾ ಅವಕಾಶ ನೀಡಿರಲಿಲ್ಲ. ಆತ ಕೋಮಾದಲ್ಲಿದ್ದಾನೆ ಅನ್ನೋದು ತಂದೆ- ತಾಯಿಗೆ ತಿಳಿದಿರಲಿಲ್ಲ. ಕಳೆದ ಮಂಗಳವಾರ ಒಟ್ಟೋ ಆರೋಗ್ಯ ಬಿಗಡಾಯಿಸಿದ್ದರಿಂದ ಉತ್ತರ ಕೊರಿಯಾ, ಜೈಲಿನಿಂದ ಬಿಡುಗಡೆ ಮಾಡಿದೆ.

22 ವರ್ಷದ ಒಟ್ಟೋನನ್ನು ಸಿನ್ಸಿನಾಟಿ ಮೆಡಿಕಲ್ ಸೆಂಟರ್ ಗೆ ದಾಖಲಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ್ರೂ ಒಟ್ಟೋ ಬದುಕಿ ಬರಲಿಲ್ಲ. ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮಗನ ಸಾವಿನ ಬಗ್ಗೆ ಹೆತ್ತವರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

ಒಟ್ಟೋ ಸಾವಿಗೆ ಸಂತಾಪ ಸೂಚಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ನಡೆಸಿರುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯಿಂದಾಗಿ ಅಮೆರಿಕನ್ನರು ಉತ್ತರ ಕೊರಿಯಾಗೆ ಭೇಟಿ ನೀಡದಂತೆ ಟ್ರಂಪ್ ಸರ್ಕಾರ ನಿರ್ಬಂಧ ವಿಧಿಸಿದ್ರೂ ಅಚ್ಚರಿಯಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...