alex Certify
ಕನ್ನಡ ದುನಿಯಾ       Mobile App
       

Kannada Duniya

ಟಾರ್ಚ್ ಬೆಳಕಲ್ಲಿ ನಡೆಯಿತು ಮದುವೆ…!

ಮದುವೆಯನ್ನು ಸಾಮಾನ್ಯವಾಗಿ ದೊಡ್ಡ ದೊಡ್ಡ ದೀಪ, ದೀಪಾಲಂಕರ ಸೇರಿದಂತೆ ಜಗಮಗಿಸುವ ದೀಪದಡಿ ಆಗುತ್ತಾರೆ. ಆದರೆ ಇಲ್ಲೊಂದು ಜೋಡಿ, ತಮ್ಮ ಮದುವೆಯನ್ನು ಎರಡು ಎಲ್ಇಡಿ ದೀಪದಡಿ ಆಗಿದ್ದಾರೆ.

ಎಲ್ಲರಂತೆ ಜಗಮಗಿಸುವ ದೀಪದಡಿ ಮದುವೆಯಾಗಲು ಅಮೆರಿಕಾ ಗಡಿಯಲ್ಲಿರುವ ಒಟ್ಟಾವಾದ ರ್ಯಾನ್ ಹಾಗೂ ಕೈಟ್ಲಿನ್ ಫ್ಲೆಟ್ ಜೋಡಿ ನಿಶ್ಚಿಯಿಸಿದ್ದರು. ಇದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ ಮದುವೆ ಕೆಲ ನಿಮಿಷಗಳಿರುವಾಗ, ಈ ಪ್ರದೇಶದಲ್ಲಿ ಭಾರಿ ಸುಂಟರಗಾಳಿ ಎದ್ದ ಪರಿಣಾಮ ವಿದ್ಯುತ್ ಕೈಕೊಟ್ಟಿದ್ದು, ಎಲ್ಇಡಿ ಬ್ಯಾಟರಿ ದೀಪದಲ್ಲಿ ಮದುವೆಯಾಗಿದ್ದಾರೆ.

ಮದುವೆಗೆ ಕೆಲ ಗಂಟೆಗಳ ಬಗ್ಗೆ ಚಂಡಮಾರುತದ ಬಗ್ಗೆ ಎಚ್ಚರಿಕೆ ಬಂದರೂ, ನವಜೋಡಿ ನಿಗದಿಯಾಗಿರುವ ಸಮಯದಲ್ಲಿಯೇ ವಿವಾಹವಾಗಲು ನಿಶ್ಚಯಿಸಿದರು. ಭಾರಿ ಗಾಳಿಯಿಂದ, ಈ ಭಾಗದ ಹಲವು ಮನೆ, ಕಾರುಗಳು ಜಖಂ ಆಗಿದ್ದವು. ವಧು ವಿವಾಹ ಮಂಟಪಕ್ಕೆ ಬರುವ ಕೆಲ ನಿಮಿಷದ ಮೊದಲು ಗಾಳಿಯಿಂದ ವಿವಾಹವಾಗಬೇಕಿದ್ದ ಕಾರ್ಲೆಟಾನ್ ಪ್ರದೇಶದಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಆದ್ದರಿಂದ ಮದುವೆಗೆಂದು ಆಯೋಜಿಸಿದ್ದ ಡಿಜೆ ಅವರ ಬಳಿಯಿದ್ದ ಎಲ್ಇಡಿ ದೀಪದಲ್ಲಿ ಮದುವೆ ನಡೆಸಬೇಕಾಯಿತು ಎಂದು ವಿವಾಹ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಅಲನ್ ವ್ಯೂ ವಿವರಿಸಿದ್ದಾರೆ.

ಮದುವೆ ಬಗ್ಗೆ ಪ್ರತಿಕ್ರಿಯಿಸಿರುವ ವಧು ಕೈಟ್ಲಿನ್, ಮಂದ ಬೆಳಕಲ್ಲಿ ಮದುವೆಯಾಗಿದ್ದು ಒಂದು ರೀತಿಯ ರೋಮ್ಯಾಂಟಿಕ್ ಫೀಲ್ ನೀಡಿದ್ದು, ಈ ಅನುಭವ ವಿಶಿಷ್ಠವಾಗಿತ್ತು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...