alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದಲ್ಲಿ ಮಹಿಳೆಯರ ಗುಲಾಮರಾಗಿರ್ತಾರೆ ಪುರುಷರು

ಭಾರತ ಪುರುಷ ಪ್ರಧಾನ ದೇಶ. ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಭಾರತದಂತೆ ವಿಶ್ವದಲ್ಲಿ ಅನೇಕ ದೇಶಗಳು ಪುರುಷ ಪ್ರಾಧಾನ್ಯತೆ ಹೊಂದಿದೆ. ಆದ್ರೆ ಈ ದೇಶದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಪುರುಷರನ್ನು ಗುಲಾಮರಂತೆ ನೋಡಲಾಗುತ್ತದೆ. ಪ್ರಾಣಿಗಳಿಗಿಂತ ಕಡೆಯಾಗಿ ಪುರುಷರನ್ನು ನೋಡಿಕೊಳ್ಳಲಾಗುತ್ತದೆ.

ಯಸ್, ಮಹಿಳಾ ಪ್ರಧಾನ ದೇಶ ವಲ್ಡ್ ಕಿಂಗ್ಡಮ್. ಇಲ್ಲಿನ ನಾಗರೀಕತೆ ಪುರುಷರಿಗಿಲ್ಲ, ಮಹಿಳೆಯರಿಗೆ ಮಾತ್ರವಿದೆ. ಪುರುಷರು ಗುಲಾಮರಂತೆ ಮಹಿಳೆಯರ ಕೆಲಸ ಮಾಡಬೇಕಾಗುತ್ತದೆ. ಗುಲಾಮರು ಮದ್ಯ ಸೇವನೆ ಮಾಡಬೇಕೆಂದ್ರೂ ಮಾಲೀಕೆಯ ಪಾದಕ್ಕೆ ಮದ್ಯವಿಟ್ಟು ನಂತ್ರ ಕುಡಿಯಬೇಕು. ಬೇರೆ ದೇಶಗಳಿಂದ ಬರುವ ಪುರುಷರು,ರಾಣಿಗಾಗಿ ಸೋಫಾ ತಯಾರಿಸಬೇಕಾಗುತ್ತದೆ.

1996ರಲ್ಲಿ ಯುರೋಪಿಯನ್ ದೇಶದ ಝೆಕ್ ರಿಪಬ್ಲಿಕ್ ನಿಂದ ಘೋಷಿಸಲ್ಪಟ್ಟಿದೆ. ಇತರ ರಾಷ್ಟ್ರಗಳಿಗೆ ಸಿಕ್ಕಿರುವ ಸ್ಥಾನಮಾನ ಈ ದೇಶಕ್ಕಿಲ್ಲ. ಇಲ್ಲಿ ಯಾವುದೇ ಸರ್ಕಾರ ಆಡಳಿತ ನಡೆಸುವುದಿಲ್ಲ. ರಾಣಿ ಪ್ಯಾಟ್ರೀಷಿಯಾ-1 ನಿರ್ಧಾರವೇ ಅಂತಿಮ. ವಿಶೇಷವೆಂದ್ರೆ ಈವರೆಗೂ ಹೊರಗಿನ ಜನರು ಪ್ಯಾಟ್ರೀಷಿಯಾ-1 ರಾಣಿಯ ಮುಖವನ್ನು ನೋಡಿಲ್ಲ.

ಈ ದೇಶದ ರಾಜಧಾನಿ ಬ್ಲ್ಯಾಕ್ ಸಿಟಿ. ದೇಶ ತನ್ನದೆ ಧ್ವಜ, ಕರೆನ್ಸಿ, ಪಾಸ್ಫೋರ್ಟ್ ಹಾಗೂ ಪೊಲೀಸ್ ಪಡೆಯನ್ನು ಹೊಂದಿದೆ. ಸರೋವರ, ಹುಲ್ಲುಗಾವಲು, ಈಜುಕೊಳ, ರೆಸ್ಟೋರೆಂಟ್, ಮೈದಾನ, ರಾತ್ರಿ ಕ್ಲಬ್ ಎಲ್ಲವೂ ಇಲ್ಲಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...