alex Certify
ಕನ್ನಡ ದುನಿಯಾ       Mobile App
       

Kannada Duniya

ಬೆನಜೀರ್ ಹತ್ಯೆ ಸಂಚು ರೂಪಿಸಲು ಅಫ್ಘಾನಿಸ್ತಾನಕ್ಕೆ ಸ್ಥಳಾಂತರಗೊಂಡಿದ್ದ ಒಸಾಮ…!

2007 ರಲ್ಲಿ ಚುನಾವಣಾ ರ್ಯಲಿ ವೇಳೆ ನಡೆದ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದ ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೋ ಸಾವಿಗೆ ಅಲ್ ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಕಾರಣವಾಗಿದ್ದು, ಇದರ ಸಂಚು ರೂಪಿಸುವ ಸಲುವಾಗಿ ಹಾಗೂ ಹತ್ಯೆಕೋರರಿಗೆ ನಿರ್ದೇಶನ ನೀಡಲು ಅಫ್ಘಾನಿಸ್ತಾನಕ್ಕೆ ಸ್ಥಳಾಂತರಗೊಂಡಿದ್ದನೆಂಬ ಅಂಶ ಬಹಿರಂಗವಾಗಿದೆ.

ಮಾಧ್ಯಮವೊಂದು ಈ ಕುರಿತು ವರದಿ ಪ್ರಕಟಿಸಿದ್ದು, ಬೆನಜೀರ್ ಭುಟ್ಟೋ ಹತ್ಯೆಗೆ ಸಂಚು ರೊಪಿಸಿದ್ದ ಒಸಾಮ ಬಿನ್ ಲಾಡೆನ್, ಇದಕ್ಕಾಗಿ ವ್ಯಕ್ತಿಯೊಬ್ಬನನ್ನು ನೇಮಿಸಿದ್ದಲ್ಲದೆ ಆತನಿಗೆ ಸ್ಫೋಟಕಗಳನ್ನು ಒದಗಿಸಿದ್ದಾಗಿ ವರದಿ ತಿಳಿಸಿದೆ.

ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ  ಐಎಸ್ಐ ಬೆನಜೀರ್ ಭುಟ್ಟೋ ಹತ್ಯೆ ಸಂಚಿನ ಕುರಿತಾಗಿ ಅಂದೇ ಗೃಹ ಸಚಿವಾಲಯಕ್ಕೆ ಮಾಹಿತಿ ರವಾನಿಸಿ ಸೂಕ್ತ ಭದ್ರತೆಯನ್ನು ಕೈಗೊಳ್ಳುವಂತೆ ಸೂಚಿಸಿತ್ತು ಎನ್ನಲಾಗಿದೆ.

ಇಷ್ಟೆಲ್ಲ ಎಚ್ಚರಿಕೆಯ ನಡುವೆಯೂ ಡಿಸೆಂಬರ್ 27, 2007 ರಂದು ರಾವಲ್ಪಿಂಡಿಯ ಲಿಯಾಕಾತ್ ಭಾಗ್ ನಲ್ಲಿ ಬೆನಜೀರ್ ಭುಟ್ಟೋ ಚುನಾವಣಾ ರ್ಯಾಲಿ ಮಾಡುತ್ತಿದ್ದ ವೇಳೆ ಬಾಂಬ್ ದಾಳಿ ನಡೆಸಲಾಗಿದ್ದು, ಬೆನಜೀರ್ ಭುಟ್ಟೋ ಸೇರಿದಂತೆ 21 ಮಂದಿ ಸಾವಿಗೀಡಾಗಿದ್ದರು.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...