alex Certify
ಕನ್ನಡ ದುನಿಯಾ       Mobile App
       

Kannada Duniya

ಮನಕಲಕುತ್ತೆ ಬುಲ್ಡೋಜರ್ ಎದುರಿನ ಮೂಕ ಪ್ರಾಣಿಯ ಅಳಲು

ಇಂಡೋನೇಷ್ಯಾದಲ್ಲಿ ಒರಾಂಗುಟಾನ್ ತನ್ನ ಮನೆಯಂತಿದ್ದ ಮರವನ್ನು ಬುಲ್ ಡೋಜರ್ ನಿಂದ ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಒರಾಂಗುಟಾನ್ ನ ಈ ಮನಕಲುಕುವ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೃಹತ್ ಮರವೊಂದನ್ನು ಬುಲ್ ಡೋಜರ್ ನೆಲಕ್ಕೆ ಉರುಳಿಸುತ್ತಿತ್ತು, ಇದನ್ನು ಕಂಡ ಒರಾಂಗುಟಾನ್ ತನ್ನ ಮನೆಯನ್ನು ಕೆಡವುತ್ತಿದ್ದಾರೆ ಎಂದು ಭಾವಿಸಿ ಅದನ್ನು ರಕ್ಷಿಸಲು ಮುಂದಾದ ವಿಡಿಯೋವನ್ನು ಇಂಟರ್ನ್ಯಾಷನಲ್ ಅನಿಮಲ್ ರೆಸ್ಕ್ಯೂ ಸಂಘಟನೆ ಬಿಡುಗಡೆ ಮಾಡಿದೆ. ಈ ಘಟನೆ ನಡೆದಿದ್ದು 2013ರಲ್ಲಿ, ಆದರೆ ಕಳೆದ ಜೂನ್ 5 ರಂದು ವಿಶ್ವ ಪರಿಸರ ದಿನದ ಅಂಗವಾಗಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ.

ಈ ವಿಡಿಯೋ ಜೊತೆಗೆ ಕಮೆಂಟ್ ಕೂಡಾ ಹಾಕಲಾಗಿದೆ. ಈ ಕಮೆಂಟ್ ನಲ್ಲಿ, “ಬುಲ್ ಡೋಜರ್ ನಿಂದ ನಾಶವಾಗುತ್ತಿರುವ ಮರವನ್ನು ಕಂಡು ಒರಾಂಗುಟಾನ್ ಹತಾಶೆಯಿಂದ ಆಶ್ರಯಕ್ಕಾಗಿ ಹಂಬಲಿಸುತ್ತಿದೆ. ಈಗಾಗಲೇ ಆ ಯಂತ್ರ ಮನೆಯನ್ನು ಆಧಾರವನ್ನಾಗಿಸಿಕೊಂಡಿದ್ದ ಒರಾಂಗುಟಾನ್ ಕಣ್ಣೆದುರೇ ಬೃಹತ್ ಮರವನ್ನು ನೆಲಸಮಗೊಳಿಸಿದೆ” ಎಂದು ಬರೆಯಲಾಗಿದೆ.

ವಿಶ್ವ ವನ್ಯಜೀವಿ ಅನುದಾನ ನಡೆಸಿರುವ ಸಮೀಕ್ಷೆಯ ಪ್ರಕಾರ ಕಳೆದ 60 ವರ್ಷದಲ್ಲಿ ಶೇ. 50ರಷ್ಟು ಬಾರ್ನಿಯನ್ ಒರಾಂಗುಟಾನ್ ಸಂತತಿ ಅಳಿವಿನಂಚಿನತ್ತ ತಲುಪುತ್ತಿದೆ. ಕಳೆದ 20 ವರ್ಷಗಳಲ್ಲಿ ಶೇ. 55ರಷ್ಟು ಒರಾಂಗುಟಾನ್ ಆಶ್ರಯತಾಣಗಳನ್ನು ನಾಶ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ದುರಾದೃಷ್ಟವಶಾತ್, ಇಂಡೋನೇಷ್ಯಾದಂತಹ ರಾಷ್ಟ್ರದಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿ ಹೋಗಿದೆ. ಒಂದೆಡೆ ಹೆಚ್ಚಾಗುತ್ತಿರುವ ಅರಣ್ಯನಾಶದಿಂದ ಒರಾಂಗುಟಾನ್ ವಾಸಸ್ಥಳ ಸಂಪೂರ್ಣವಾಗಿ ಕ್ಷೀಣಿಸುತ್ತಿದೆ. ಇದರಿಂದ ಆ ಜೀವಿಗಳು ಅನಾಥವಾಗಿ ಮೃತಪಡುತ್ತಿವೆ.

ಜೂನ್ 5 ರಂದು ಅಪ್ಲೋಡ್ ಮಾಡಿರುವ ಈ ವಿಡಿಯೋವನ್ನು ಈವರೆಗೂ 155,000 ಬಾರಿ ವೀಕ್ಷಿಸಲಾಗಿದೆ. 4,900 ಬಾರಿ ಶೇರ್ ಮಾಡಿದ್ದಾರೆ. ಇನ್ನು ಈ ಪೋಸ್ಟ್ ಬಗ್ಗೆ ಹಲವರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಒರಾಂಗುಟಾನ್ ಕುರಿತು ಭಾವುಕರಾಗಿ ಈ ದೃಶ್ಯಾವಳಿಯನ್ನು ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...