alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ‘ಹಿರಿಯ’ ಗೊರಿಲ್ಲಾ ಇನ್ನಿಲ್ಲ

ಸ್ಯಾನ್ ಡಿಯಾಗೋ ಝೂ ಸಫಾರಿ ಪಾರ್ಕ್ ನಲ್ಲಿದ್ದ 60 ವರ್ಷದ ಗೊರಿಲ್ಲಾ ಮೃತಪಟ್ಟಿದೆ. ವಿಲಾ ಎಂಬ ಈ ಗೊರಿಲ್ಲಾ ವಿಶ್ವದ ಅತಿ ಹಿರಿಯ ಗೊರಿಲ್ಲಾಗಳಲ್ಲೊಂದಾಗಿತ್ತು. ಕಳೆದ ಅಕ್ಟೋಬರ್ ನಲ್ಲಷ್ಟೆ 60 ನೇ ವರ್ಷಕ್ಕೆ ಕಾಲಿಟ್ಟಿತ್ತು.

ಆದ್ರೆ ಗುರುವಾರ ಪಾರ್ಕ್ ನಲ್ಲೇ ಕೊನೆಯುಸಿರೆಳೆದಿದೆ. ಹಲವು ಮರಿಗಳಿಗೆ ಜನ್ಮಕೊಟ್ಟಿದ್ದ ಗೊರಿಲ್ಲಾ, ತನ್ನ ಐದನೇ ತಲೆಮಾರನ್ನೂ ನೋಡಿದೆ. ಸಾಮಾನ್ಯವಾಗಿ ಗೊರಿಲ್ಲಾಗಳು 35-40 ವರ್ಷ ಬದುಕುತ್ತವೆ. ಆದ್ರೆ ವಿಲಾ 60 ವರ್ಷಗಳ ಕಾಲ ಜೀವಿಸಿದೆ.

ವಿಲಾಗೆ ವಾತದ ಸಮಸ್ಯೆ ಇತ್ತು. ವಯಸ್ಸಾಗಿದ್ದರಿಂದ ವಯೋಸಹಜ ಖಾಯಿಲೆಗಳು ಆವರಿಸಿದ್ದವು. ಗೊರಿಲ್ಲಾದ ಆರೈಕೆಗಾಗಿ ಪ್ರಾಣಿವೈದ್ಯರನ್ನೂ ನೇಮಕ ಮಾಡಲಾಗಿತ್ತು. ಆಫ್ರಿಕನ್ ಕಾಂಗೋದಲ್ಲಿ 1957ರಲ್ಲಿ ಜನಿಸಿದ್ದ ಈ ಗೊರಿಲ್ಲಾವನ್ನು 1975ರಲ್ಲಿ ಸಫಾರಿ ಪಾರ್ಕ್ ಗೆ ಕರೆತರಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...