alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ನ ಮಾರ್ಕ್ ಜುಕರ್ ಬರ್ಗ್ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

mark-zuckerberg-fb 15

ಸಾಮಾಜಿಕ ಜಾಲತಾಣಗಳನ್ನು ಇತ್ತೀಚೆಗೆ ಜನ ಹೆಚ್ಚಾಗಿ ಬಳಸುತ್ತಾರೆ. ಅದರಲ್ಲಿಯೂ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರ ಕುರಿತ ಕುತೂಹಲದ ಮಾಹಿತಿ ಇಲ್ಲಿದೆ ನೋಡಿ.

ಫೇಸ್ ಬುಕ್ ಜನರಲ್ಲಿ ಹಾಸುಹೊಕ್ಕಾಗಿರುವ ಈ ಸಂದರ್ಭದಲ್ಲಿ ಮಾರ್ಕ್ ಜುಕರ್ ಬರ್ಗ್ ನಿನ್ನೆಯಷ್ಟೇ ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಫೇಸ್ ಬುಕ್ ಅನ್ನು ಎಫ್.ಬಿ ಅಥವಾ ಫೇಸ್ ಬುಕ್ ಎಂದು ಕರೆಯಲಾಗುತ್ತದೆ. ಮೊದಲಿಗೆ ಇದಕ್ಕೆ ‘ದಿ ಫೇಸ್ ಬುಕ್’ ಎಂದು ಕರೆಯಲಾಗಿತ್ತು. 2009ರಲ್ಲಿ ರಿಸಿಷನ್ (ಹಿಂಜರಿತ)ಆದ ಸಂದರ್ಭದಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದರು. ಅವರು ಯಾವಾಗಲೂ ಒಂದೇ ಬಣ್ಣದ ಟೀ ಶರ್ಟ್ ಧರಿಸುತ್ತಾರೆ.

ಒಂದೇ ಬಣ್ಣದ ಟೀ ಶರ್ಟ್ ಧರಿಸುವ ಬಗ್ಗೆ ಪ್ರಶ್ನಿಸಿದರೆ, ನನಗೆ ಡ್ರೆಸ್ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲ. ಅದಕ್ಕೆ ಪ್ರಾಮುಖ್ಯತೆ ಕೊಡಲ್ಲ ಎನ್ನುತ್ತಾರೆ. 2004ರಲ್ಲಿ ಮೊದಲಬಾರಿಗೆ ಪೇಟೆಂಟ್ ಪಡೆದುಕೊಂಡ ಅವರ ಬಳಿ ಈಗ, 50 ಪೇಟೆಂಟ್ ಗಳಿವೆ.

ಜುಕರ್ ಬರ್ಗ್ ಅವರಿಗೆ ಇಂಗ್ಲಿಷ್ ಮಾತ್ರವಲ್ಲದೇ, ಫ್ರೆಂಚ್, ಹಿಬ್ರೂ, ಲ್ಯಾಟೀನ್ ಹಾಗೂ ಗ್ರೀಕ್ ಭಾಷೆಗಳನ್ನು ಓದಲು ಹಾಗೂ ಬರೆಯಲು ಬರುತ್ತದೆ. ಎಲ್ಲರೂ, ಸಾಮಾನ್ಯವಾಗಿ ನೀಲಿ ಫೇಸ್ ಬುಕ್ ಬಳಸಿದರೆ, ಅವರು ಮಾತ್ರ ಹಳದಿ ಫೇಸ್ ಬುಕ್ ಬಳಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...