alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ನ್ಯೂಸ್: ಆರ್ಥಿಕ ದಿವಾಳಿಯತ್ತ ಪಾಕಿಸ್ತಾನ…?

ಪಾಕಿಸ್ತಾನವು ಇಂದು 72 ನೇ ಸ್ವಾತಂತ್ರ ದಿನವನ್ನು ಆಚರಿಸಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಪಾಕ್ ಜನತೆ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದ್ದು, ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯು ತೀವ್ರವಾಗಿ ಬಿಗಡಾಯಿಸಿದೆ ಎಂದು ಹೇಳಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದಲ್ಲಿ ಕೇವಲ 10 ಬಿಲಿಯನ್ ಫಾರಿನ್ ಕರೆನ್ಸಿ ಇದ್ದು, ಇದು ಕೇವಲ ಎರಡು ತಿಂಗಳು ಹೊರದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಕಾಗುತ್ತದೆ ಎಂದು ತಿಳಿದು ಬಂದಿದೆ. ಎರಡು ತಿಂಗಳು ಮುಗಿದ ನಂತರ ಪಾಕಿಸ್ತಾನವು ಆಮದು ಮಾಡಿಕೊಂಡ ವಸ್ತುಗಳಿಗೆ ಹಣ ನೀಡಲು ಆರ್ಥಿಕ ಮುಗ್ಗಟ್ಟನ್ನು ಎದುರಿಸಲಿದ್ದು, ವಿಶ್ವಬ್ಯಾಂಕಿನ ಬಾಗಿಲನ್ನು ಸಾಲಕ್ಕಾಗಿ ತಟ್ಟಬೇಕಾಗುತ್ತದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಆರ್ಥಿಕ ದುಃಸ್ಥಿತಿಗೆ ಆಮದು ಮಾಡಿಕೊಳ್ಳುವ ಮತ್ತು ರಫ್ತು ಮಾಡುವ ವಸ್ತುಗಳ ನಡುವಿನ ಅಂತರ ಗಣನೀಯವಾಗಿ ಏರಿಕೆಯಾಗಿರುವುದು ಕಾರಣವೆಂದು ತಿಳಿದು ಬಂದಿದೆ. ಪಾಕಿಸ್ತಾನದ ಪ್ರಧಾನಿಯಾಗಿ ಆಗಸ್ಟ್ 18 ರಂದು ಪ್ರಮಾಣವಚನ ಸ್ವೀಕರಿಸಲಿರುವ ಇಮ್ರಾನ್ ಖಾನ್ ಅವರ ಪಾಲಿಗೆ ಆರ್ಥಿಕ ಪರಿಸ್ಥಿತಿ ನಿಭಾಯಿಸುವುದು ಬಹು ದೊಡ್ಡ ಸವಾಲಾಗಿ ಪರಿಣಮಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...