alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯ ಸಾವಿನ ಸುದ್ದಿ ಕೇಳಿ ಮಗನಿಗೂ ಹೃದಯಾಘಾತ

ತಾಯಿಯ ಸಾವಿನ ಸುದ್ದಿ ಕೇಳಿ ದುಬೈನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಅನಿಲ್ ಕುಮಾರ್ ಗೋಪಿನಾಥನ್ ಕೇರಳದ ಕೊಲ್ಲಂ ಜಿಲ್ಲೆಯವನು. ತಾಯಿ ಕೌಸಲ್ಯ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿತ್ತು.

ಅದಾದ ಮರುದಿನ ಅನಿಲ್ ತನ್ನ ಕೋಣೆಯಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 20 ವರ್ಷಗಳಿಂದ ಅನಿಲ್ ದುಬೈನ ಟೇಲರಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ.

ಸಹೋದರ ಸಂತೋಷ್ ಕೂಡ ದುಬೈನಲ್ಲೇ ಇದ್ದ. ತಾಯಿಯ ಸಾವಿನ ಹಿನ್ನೆಲೆಯಲ್ಲಿ ಆತ ಭಾರತಕ್ಕೆ ತೆರಳಿದ್ದ. ಮರುದಿನ ಅನಿಲ್ ಕೂಡ ಕೇರಳಕ್ಕೆ ಹೊರಡುವವನಿದ್ದ. ಆದ್ರೆ ಅಮ್ಮನ ಶವಸಂಸ್ಕಾರಕ್ಕೂ ಮುನ್ನವೇ ಮಗ ಕೂಡ ಇಹಲೋಕ ತ್ಯಜಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...