alex Certify
ಕನ್ನಡ ದುನಿಯಾ       Mobile App
       

Kannada Duniya

ಕರಡಿಗೆ ಆಹಾರ ಹಾಕಲು ಕಿಟಕಿ ತೆರೆದಾಗ…..

ಸಫಾರಿಗೆ ಹೋದಾಗ ವಾಹನದ ಕಿಟಕಿ, ಬಾಗಿಲುಗಳನ್ನು ಕಡ್ಡಾಯವಾಗಿ ಬಂದ್ ಮಾಡಿಕೊಳ್ಳಲೇಬೇಕು. ಯಾಕಂದ್ರೆ ಯಾವುದೇ ಕ್ಷಣದಲ್ಲಾದ್ರೂ ಪ್ರಾಣಿಗಳು ದಾಳಿ ಮಾಡುವ ಅಪಾಯವಿರುತ್ತದೆ. ಆದ್ರೆ ಪ್ರವಾಸಿಗರು ಮಾತ್ರ ಈ ಎಚ್ಚರಿಕೆಯನ್ನು ಅಲಕ್ಷಿಸಿ ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಚೀನಾದಲ್ಲಿ ಯುವಕನೊಬ್ಬ ತನ್ನ ಸ್ನೇಹಿತರ ಜೊತೆಗೆ ಕಾರಿನಲ್ಲಿ ಸಫಾರಿಗೆ ತೆರಳಿದ್ದ. ಕರಡಿಗಳ ಹಿಂಡು ನೋಡಿ ಅವುಗಳಿಗೆ ಆಹಾರ ಹಾಕೋಣ ಅಂದ್ಕೊಂಡು ಕಾರಿನ ಕಿಟಕಿ ತೆರೆದಿದ್ದಾನೆ. ಅದೇ ಸಮಯಕ್ಕೆ ಕಾಯುತ್ತಿದ್ದ ಕರಡಿ ಆತನ ಮೇಲೆ ದಾಳಿ ಮಾಡಿದೆ.

ಆತನ ಕೈಗೆ ಕರಡಿ ಕಚ್ಚಿದೆ. ಕೂಡಲೇ ಕಾರು ಮುಂದಕ್ಕೆ ಚಲಿಸಿದ್ದರಿಂದ ಆತ ಪಾರಾಗಿದ್ದಾನೆ. ಬೀಜಿಂಗ್ ಹೊರವಲಯದಲ್ಲಿರುವ ಬದಾಲಿಂಗ್ ವೈಲ್ಡ್ ಲೈಫ್ ವರ್ಲ್ಡ್ ನಲ್ಲಿ ಈ ಘಟನೆ ನಡೆದಿದೆ. ಇನ್ನೊಂದು ಕಾರಿನಲ್ಲಿ ಹಿಂಬದಿಯಿಂದ ಬರ್ತಾ ಇದ್ದ ಸ್ನೇಹಿತರು ಕರಡಿ ದಾಳಿಯನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಕಳೆದ ವರ್ಷ ಇದೇ ಪಾರ್ಕ್ ನಲ್ಲಿ ಇಬ್ಬರು ಮಹಿಳೆಯರು ಸಹಪ್ರಯಾಣಿಕರ ಜೊತೆ ಜಗಳ ಮಾಡಿಕೊಂಡು ಸಫಾರಿ ವಾಹನದಿಂದ ಕೆಳಕ್ಕೆ ಇಳಿದಿದ್ರು. ಕ್ರೂರ ಹುಲಿಗಳು ಮಹಿಳೆಯರನ್ನು ತಿಂದು ಹಾಕಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...