alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರನ್ನು ಅತ್ಮೀಯ ಗೆಳೆಯ ಎಂದ ಇಸ್ರೇಲ್ ಪ್ರಧಾನಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಪ್ರಜೆಗಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನ್ಯಾಥ್ಯೂ ಅವರು ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

ದೀಪಾವಳಿ ಹಿಂದಿನ ದಿನ ಇಸ್ರೇಲ್ ಜನತೆಯ ಪರವಾಗಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ‌ ನ್ಯಾಥ್ಯೂ,‌ ಮೋದಿ ಅವರನ್ನು ತಮ್ಮ ಆತ್ಮೀಯ‌ ಗೆಳೆಯ ಎಂದು‌ ಹೇಳಿಕೊಂಡಿದ್ದಾರೆ. ಹಿಂದಿಯಲ್ಲಿ ಶುಭಾಶಯ ಹೇಳಿರುವ‌ ಅವರು, ಈ ದೀಪಾವಳಿ ದೇಶದಲ್ಲಿ ಸಂತೋಷ ವೃದ್ಧಿಸಲಿ ಎಂದು ಆಶಿಸಿದ್ದಾರೆ.

ಇನ್ನು ಪ್ರಧಾನಿ ಮೋದಿ ಅವರು ಕೇದಾರನಾಥದಲ್ಲಿ ಈ ಬಾರಿಯ ದೀಪಾವಳಿಯನ್ನು ಆಚರಿಸುತ್ತಿದ್ದು, ಕೇದಾರನಾಥದಲ್ಲಿರುವ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಈ ಭಾಗದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಹಾಗೂ ದೇವಾಲಯದ ಬಳಿಯಿರುವ ಶಂಕರಾಚಾರ್ಯ ಕುಟೀರ ಅಭಿವೃದ್ಧಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ‌.

ಕಳೆದ ಬಾರಿ ಕೇದಾರನಾಥಕ್ಕೆ ಭೇಟಿ ನೀಡಿದ ವೇಳೆ‌‌ ಈ‌ ಭಾಗದ ಮೂಲಸೌಕರ್ಯಗಳಿಗೆ ವಿವಿಧ ಯೋಜನೆಗೆ ಚಾಲನೆ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...