alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕಿಂಗ್ ಲಾಟ್ ಗಾಗಿ ಮನುಷ್ಯತ್ವವನ್ನೇ ಮರೆತ ಕಾರು ಚಾಲಕ

guard_650x400_81496132195

ಚೀನಾದ ಗುವಾಂಗ್ಡಾಂಗ್ ನಲ್ಲಿ ಪಾರ್ಕಿಂಗ್ ಪ್ಲೇಸ್ ಗಾಗಿ ವ್ಯಕ್ತಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಮೈಮೇಲೆ ಕಾರು ಹರಿಸಿದ್ದಾನೆ. ಪಾರ್ಕಿಂಗ್ ಲಾಟ್ ನತ್ತ ನುಗ್ಗಿ ಬರ್ತಾ ಇದ್ದ ಕಾರನ್ನು ನಿಲ್ಲಿಸಲು ಸೆಕ್ಯೂರಿಟಿ ಗಾರ್ಡ್ ಕೈ ಅಡ್ಡ ಮಾಡಿದ್ದ. ಆದ್ರೂ ಚಾಲಕ ಕಾರನ್ನು ನಿಲ್ಲಿಸಲೇ ಇಲ್ಲ.

ಕೊನೆಗೆ ತನ್ನ ಕರ್ತವ್ಯ ನಿಭಾಯಿಸಲು ಬೇರೆ ದಾರಿ ಕಾಣದೆ ಸೆಕ್ಯೂರಿಟಿ ಗಾರ್ಡ್ ಕಾರಿನ ಎದುರಲ್ಲೇ ಮಲಗಿಬಿಟ್ಟ. ಆಗ್ಲಾದ್ರೂ ಚಾಲಕ ವಾಹನವನ್ನು ನಿಲ್ಲಿಸಬಹುದು ಅನ್ನೋದು ಅವನ ನಿರೀಕ್ಷೆ. ಆದ್ರೆ ಒಳ್ಳೆ ಪಾರ್ಕಿಂಗ್ ಲಾಟ್ ಹುಡುಕಾಟದಲ್ಲಿದ್ದ ಚಾಲಕ ಸೆಕ್ಯೂರಿಟಿ ಗಾರ್ಡ್ ಮೈಮೇಲೆ ಕಾರು ಹರಿಸಿದ್ದಾನೆ.

ಈ ವಿಡಿಯೋ ಫೇಸ್ಬುಕ್ ನಲ್ಲಿ ಹರಿದಾಡ್ತಾ ಇದ್ದು, ಭದ್ರತಾ ಸಿಬ್ಬಂದಿಯ ಕರ್ತವ್ಯ ನಿಷ್ಠೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ನಿಷ್ಕರುಣಿ ಕಾರು ಚಾಲಕನಿಗೆ ಹಿಡಿಶಾಪ ಹಾಕಿದ್ದಾರೆ. ಘಟನೆಯಲ್ಲಿ ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯವಾಗಿಲ್ಲ ಎನ್ನಲಾಗ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...