alex Certify
ಕನ್ನಡ ದುನಿಯಾ       Mobile App
       

Kannada Duniya

ಎಮ್ಮೆಗಳ ಹರಾಜಿಗೆ ಸಿದ್ದವಾಯ್ತು ಪಾಕಿಸ್ತಾನ

ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ಪ್ರಧಾನಿ ನಿವಾಸದಲ್ಲಿದ್ದ ಹಲವು ವಸ್ತುಗಳನ್ನು ಹರಾಜು ಹಾಕಲು ತೀರ್ಮಾನಿಸಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಬಳಕೆ ಮಾಡುತ್ತಿದ್ದ ಹೆಲಿಕ್ಯಾಪ್ಟರ್, ಕಾರುಗಳನ್ನು ಮಾರಾಟ ಮಾಡಲು ತೀರ್ಮಾನಿಸಿದೆ.

ಅಷ್ಟು ಮಾತ್ರ ಅಲ್ಲ, ನವಾಜ್ ಷರೀಫ್ ಅಧಿಕಾರದಲ್ಲಿದ್ದ ವೇಳೆ ಪ್ರಧಾನಿ ನಿವಾಸದಲ್ಲಿ ಸಾಕಲಾಗಿದ್ದ ಎಮ್ಮೆಗಳನ್ನೂ ಹರಾಜು ಹಾಕುವ ಮೂಲಕ ಹಣ ಗಳಿಕೆಗೆ ಮುಂದಾಗಿದೆ. ಈ ಮಾಹಿತಿಯನ್ನು ಪ್ರಧಾನಿ ಇಮ್ರಾನ್‌ ಖಾನ್‌ ಅವರ ರಾಜಕೀಯ ವಿಶೇಷ ಸಹಾಯಕ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಸೆ.17 ರಂದು ಈ ಹರಾಜು ನಡೆಯಲಿದೆ ಎಂದು ಪಾಕಿಸ್ತಾನದ ಖಾಸಗಿ ಚಾನೆಲ್ ವರದಿ ಮಾಡಿದೆ. ಈ ಚಾನೆಲ್ ನಮೀಮ್ ಅವರ ಟ್ವೀಟ್ ಉಲ್ಲೇಖಿಸಿ ವರದಿ ಪ್ರಕಟಿಸಿದೆ. ಹರಾಜಿನಲ್ಲಿ  80 ಲಕ್ಷ ಮೌಲ್ಯದ ಕಾರುಗಳು, ನಾಲ್ಕು ಹೆಲಿಕಾಪ್ಟರ್, ಎಮ್ಮೆಗಳು ಸೇರಿವೆ ಎಂದು ಹೇಳಲಾಗಿದೆ.

ಇಮ್ರಾನ್ ಖಾನ್ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಲ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಮುನ್ನೂರು ಕೋಟಿ ಮೊತ್ತದ ಸರಕಾರಿ ಜಮೀನನ್ನು, ಬಳಸದೆ ಇರುವ ಸರಕಾರದ ಕೆಲ ವಸ್ತುಗಳನ್ನು ಹರಾಜಿಗಿಡುವ ಮೂಲಕ ತಾನು ಪ್ರತಿನಿತ್ಯ ಪಾವತಿಸುತ್ತಿರುವ 5 ಬಿಲಿಯನ್ ಡಾಲರ್ ಬಡ್ಡಿ ಹಣಕ್ಕೆ ಸರಿದೂಗಿಸುವ ಪ್ರಯತ್ನ ಮಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...