alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕದ ಒಲಿಂಪಿಕ್ಸ್ ಓಟಗಾರ ಟೈಸನ್ ಪುತ್ರಿಯ ಹತ್ಯೆ

tyson-gay-daughter

ಅಮೆರಿಕದ ಅಥ್ಲೀಟ್ ಟೈಸನ್ ಗೇ ಅವರ 15 ವರ್ಷದ ಪುತ್ರಿ ಟ್ರಿನಿಟಿ ಗುಂಡೇಟಿಗೆ ಬಲಿಯಾಗಿದ್ದಾಳೆ. ಯೂನಿವರ್ಸಿಟಿ ಆಫ್ ಕೆಂಟುಕಿ ಮೆಡಿಕಲ್ ಸೆಂಟರ್ ಆವರಣದಲ್ಲಿ ಈ ಹತ್ಯೆ ನಡೆದಿದೆ.

ಲೆಕ್ಸಿಂಗ್ಟನ್ ನಲ್ಲಿರುವ ವಿಶ್ವವಿದ್ಯಾನಿಲಯದ ಆವರಣದಲ್ಲಿರೋ ಪಾರ್ಕಿಂಗ್ ಲಾಟ್ ನಲ್ಲಿ ಎರಡು ವಾಹನಗಳ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಿದೆ ಅನ್ನೋ ಮಾಹಿತಿ ಮೇರೆಗೆ ಬೆಳಗ್ಗೆ 4 ಗಂಟೆಗೆ ಪೊಲೀಸರು ಅಲ್ಲಿಗೆ ತಲುಪಿದ್ರು. ಒಂದು ಕಾರನ್ನು ತಡೆದ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗುಂಡು ಹಾರಿಸಿದ್ದು, ಅದು ಟ್ರಿನಿಟಿರನ್ನು ಬಲಿ ಪಡೆದಿದೆ.

ಗುಂಡಿನ ಚಕಮಕಿಯಲ್ಲಿ ನಿರತರಾಗಿದ್ದ 2 ವಾಹನಗಳಲ್ಲಿ ಯಾವುದೂ ಟ್ರಿನಿಟಿಗೆ ಸೇರಿದ್ದಾಗಿರಲಿಲ್ಲ ಎನ್ನಲಾಗ್ತಾ ಇದೆ. ಆದ್ರೆ ಪೊಲೀಸರು ಇದನ್ನು ಒಪ್ಪುತ್ತಿಲ್ಲ, ಗುಂಡಿನ ದಾಳಿಯಲ್ಲಿ ನಿರತಳಾಗಿದ್ದ ಬಾಲಾಪರಾಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆಂದು ಪ್ರಕಟಿಸಿದ್ದಾರೆ. ಮೃತ ಟ್ರಿನಿಟಿ ತಂದೆ ಟೈಸನ್ ಗೇ 3 ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ. 2012ರ ಲಂಡನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ತಂಡದಲ್ಲೂ ಅವರಿದ್ರು. ಆದ್ರೆ ಟೈಸನ್ ಸ್ಟಿರಾಯ್ಡ್ ಸೇವಿಸಿ 2013ರಲ್ಲಿ ಸಿಕ್ಕಿಬಿದ್ದಿದ್ರು. ಟ್ರಿನಿಟಿ ಕೂಡ ತಂದೆಯಂತೆ ಒಳ್ಳೆಯ ಅಥ್ಲೀಟ್, ಶಾಲಾ ಮಟ್ಟದಲ್ಲಿ ಹಲವು ಚಾಂಪಿಯನ್ ಶಿಪ್ ಗಳನ್ನು ಗೆದ್ದಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...