alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾ ರಸ್ತೆಗಿಳಿದ ಓಲಾ….

ಆ್ಯಪ್ ಮೂಲಕ ಕ್ಯಾಬ್ ಸೌಲಭ್ಯ ನೀಡುವ ಭಾರತೀಯ ಮೂಲದ ಕಂಪನಿ ಓಲಾ ತನ್ನ ಸೇವೆಯನ್ನು ವಿದೇಶಕ್ಕೂ ವಿಸ್ತರಣೆ ಮಾಡ್ತಿದೆ. ಓಲಾ ಸೇವೆ ಈಗ ಆಸ್ಟ್ರೇಲಿಯಾದಲ್ಲಿ ಲಭ್ಯವಿದೆ. ಸೋಮವಾರ ಸಿಡ್ನಿ ರಸ್ತೆಯಲ್ಲಿ ಓಲಾ ತನ್ನ ಸಂಚಾರ ಶುರು ಮಾಡಿದೆ.

ಕಳೆದ ತಿಂಗಳು ಓಲಾ ಪರ್ತ್ ಮಾರುಕಟ್ಟೆಯಲ್ಲಿ ತನ್ನ ಮೊದಲ ಸಂಚಾರಕ್ಕೆ ಚಾಲನೆ ನೀಡಿತ್ತು. ಜನವರಿಯಲ್ಲಿಯೇ ಯೋಜನೆಯನ್ನು ಆಸ್ಟ್ರೇಲಿಯಾ ಮಾರುಕಟ್ಟೆಗೆ ವಿಸ್ತರಣೆ ಮಾಡುವುದಾಗಿ ಕಂಪನಿ ಹೇಳಿಕೆ ನೀಡಿತ್ತು. ಸಿಡ್ನಿಯಲ್ಲಿ ಸ್ಥಳೀಯ ಕ್ಯಾಬ್ ಸಂಸ್ಥೆಯ ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಓಲಾ ಅಲ್ಲಿ ತನ್ನ ಸೇವೆ ನೀಡಲು ಸಿದ್ಧವಾಗಿದೆ.

ಚಾಲಕರ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಾಗುವುದು. ಅವ್ರಿಗೆ ವಿಶೇಷ ತರಬೇತಿ ನೀಡಲಾಗುವುದು ಹಾಗೂ ಆದಾಯ ಗಳಿಸುವ ಮಾರ್ಗದ ಬಗ್ಗೆ ಹೇಳಿಕೊಡಲಾಗುವುದೆಂದು ಕಂಪನಿ ಹೇಳಿದೆ. ಭಾರತದ ಮಾರುಕಟ್ಟೆಯಂತೆ ಆಸ್ಟ್ರೇಲಿಯಾದಲ್ಲಿ ಕೂಡ ಉಬರ್ ಓಲಾಗೆ ಪ್ರತಿಸ್ಪರ್ಧಿ. ಉಬರ್ 2012ರಲ್ಲಿಯೇ ಆಸ್ಟ್ರೇಲಿಯಾದ 19 ನಗರಗಳಲ್ಲಿ ತನ್ನ ಸೇವೆ ನೀಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...