alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕಲೇಟ್ ಕದಿಯೋದ್ರಲ್ಲಿ ಎಕ್ಸ್ ಪರ್ಟ್ ಈ ಅಳಿಲು

ಕಳ್ಳ ಅಳಿಲೊಂದು ಲಿಪ್ ಬಾಮ್ ಹಾಗೂ ಚಾಕಲೇಟ್ ಕದಿಯುವಾಗ ಸಿಕ್ಕಿಬಿದ್ದಿದೆ. ಮೈಕೆಲ್ ಬೌಡ್ರೆಯಾಕ್ಸ್ ಎಂಬ ಮಹಿಳೆ ಪ್ರತಿವರ್ಷ ಸಾರ್ವಜನಿಕರಿಗೆ ಹಾಲಿಡೇ ಟ್ರೀಟ್ ಕೊಡ್ತಾರೆ. ಕ್ಯಾಂಡಿ, ಸ್ನಾಕ್ಸ್, ಟಿಶ್ಯೂ, ಹ್ಯಾಂಡ್ ವಾರ್ಮರ್ ಮತ್ತು ಇತರ ದಿನಬಳಕೆ ವಸ್ತುಗಳನ್ನು ಹಂಚುತ್ತಾರೆ.

ತಮ್ಮ ಮನೆ ಬಾಗಿಲಲ್ಲೇ ಅವುಗಳನ್ನೆಲ್ಲ ಮೈಕೆಲ್ ಇಟ್ಟಿರ್ತಾರೆ. ಅಗತ್ಯವಿರುವವರು ಅದನ್ನು ತೆಗೆದುಕೊಂಡು ಹೋಗಬಹುದು. ಬುಟ್ಟಿಯನ್ನು ಹೊರಗಿಟ್ಟು ಒಂದು ಗಂಟೆ ಕಳೆಯುವಷ್ಟರಲ್ಲಿ ಪೂರ್ತಿ ಖಾಲಿಯಾಗಿಬಿಡುತ್ತಿತ್ತು. ಎಲ್ಲವನ್ನೂ ಯಾರು ಕದಿಯುತ್ತಿದ್ದಾರೆ ಅನ್ನೋದನ್ನು ಪತ್ತೆ ಮಾಡಲು ಮೈಕೆಲ್ ಸಿಸಿ ಟಿವಿ ಅಳವಡಿಸಿದ್ರು.

ಚಾಕಲೇಟ್ ಹಾಗೂ ಲಿಪ್ ಬಾಮ್ ಕದಿಯುತ್ತಿದ್ದ ಅಳಿಲು ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊನೆಗೆ ಹೊಂಚು ಹಾಕಿ ಕುಳಿತ ಮೈಕೆಲ್ ಪತಿ ಅಳಿಲನ್ನು ಹಿಡಿಯಲು ಸಾಕಷ್ಟು ಕಸರತ್ತು ಮಾಡಿದ್ರು. ಆದ್ರೆ ಚುರುಕಾದ ಅಳಿಲು ಚಾಕ್ಲೆಟ್ ಎಗರಿಸಿಕೊಂಡು ಎಸ್ಕೇಪ್ ಆಗಿಬಿಟ್ಟಿತ್ತು.

ಮರುದಿನ ಅಳಿಲಿಗಾಗಿಯೇ ಮೈಕೆಲ್ ವಿಶೇಷ ತಿನಿಸುಗಳನ್ನು ಇಟ್ಟಿದ್ರು. ವಾಲ್ನಟ್, ಪಾಪ್ ಕಾರ್ನ್ ಹಾಗೂ ಕುಂಬಳಕಾಯಿ ಬೀಜಗಳನ್ನು ಪ್ರತ್ಯೇಕವಾಗಿ ಎತ್ತಿಟ್ಟಿದ್ರು. ಅದನ್ನೆಲ್ಲ ಸ್ವಾಹಾ ಮಾಡಿದ ಅಳಿಲು ಚಾಕಲೇಟ್ ಮತ್ತು ಲಿಪ್ ಬಾಮ್ ಅನ್ನು ಕದಿಯದೇ ಹೊರಟು ಹೋಗಿದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...