alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ವೇತಭವನ ಖಾಲಿ ಮಾಡಿ ಎಲ್ಲಿ ನೆಲೆಸ್ತಾರೆ ಒಬಾಮಾ?

obama

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದಿಂದ ಬರಾಕ್ ಒಬಾಮಾ ದೂರವಾಗಲಿದ್ದಾರೆ. ಅವರ ಅಧಿಕಾರದ ಅವಧಿ ಮುಗಿಯುವ ಹಂತದಲ್ಲಿದ್ದು, ಹೊಸ ಅಧ್ಯಕ್ಷರು ಶ್ವೇತಭವನಕ್ಕೆ ಎಂಟ್ರಿ ಕೊಡಲಿದ್ದಾರೆ.

ಒಬಾಮಾ ಶ್ವೇತಭವನದಿಂದ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ. ಶ್ವೇತಭವನಕ್ಕೆ ಸಮೀಪದಲ್ಲಿ ಈ ಮನೆ ಇದೆ. ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಹಿರಿಯ ಮಾರ್ಗದರ್ಶಿಯಾಗಿದ್ದ ಲೊಖ್ತರ್ತ್ ಅವರಿಗೆ ಸೇರಿದ ಬೃಹತ್ ಬಂಗಲೆಯಲ್ಲಿ ಒಬಾಮಾ ಕುಟುಂಬದವರೊಂದಿಗೆ ವಾಸ್ತವ್ಯ ಹೂಡಲಿದ್ದಾರೆ. ಈ ಮನೆ 8,200 ಚದರ ಅಡಿ ವಿಸ್ತಾರದಲ್ಲಿದ್ದು, ಬರೋಬ್ಬರಿ 9 ಬೆಡ್ ರೂಂಗಳನ್ನು ಇದು ಒಳಗೊಂಡಿದೆ.

ಅಲ್ಲದೇ ಗಾರ್ಡನ್ ಸೇರಿದಂತೆ ಹಲವು ಸೌಕರ್ಯಗಳಿದ್ದು, 14 ಲಕ್ಷ ರೂ. ಬಾಡಿಗೆ ನಿಗದಿಯಾಗಿದೆ ಎನ್ನಲಾಗಿದೆ. ಬರಾಕ್ ಒಬಾಮಾ, ಶ್ವೇತಭವನದಿಂದ ವಾಸ್ತವ್ಯ ಖಾಲಿ ಮಾಡಿ, ಸಮೀಪದಲ್ಲೇ ಇರುವ ಈ ಬೃಹತ್ ಬಂಗಲೆಯಲ್ಲಿ ನೆಲೆಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...