alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗೆ ಧನ್ಯವಾದ ಹೇಳಿದ ಒಬಾಮಾ

modiobama-main

ಅಮೆರಿಕದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ. ಭಾರತ-ಅಮೆರಿಕ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಉತ್ತಮಪಡಿಸಿದ್ದಕ್ಕಾಗಿ ಒಬಾಮಾ, ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಿನ್ನೆ ಒಬಾಮಾ ಮೋದಿಗೆ ದೂರವಾಣಿ ಕರೆ ಮಾಡಿದ್ದರು.

ರಕ್ಷಣೆ, ನಾಗರಿಕ ಪರಮಾಣು ಶಕ್ತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಉಭಯ ರಾಷ್ಟ್ರಗಳ ಜಂಟಿ ಹೋರಾಟವನ್ನು ಒಬಾಮಾ ಶ್ಲಾಘಿಸಿದ್ದಾರೆ. 2015ರ ಗಣರಾಜ್ಯೋತ್ಸವದಂದು ಭಾರತಕ್ಕೆ ಒಬಾಮಾ ಆಗಮಿಸಿದ್ದರು, ಆ ಸಂದರ್ಭವನ್ನು ಮತ್ತೆ ಮೆಲುಕು ಹಾಕಿದ ಒಬಾಮಾ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೂಡ ಹೇಳಿದ್ದಾರೆ.

ಆರ್ಥಿಕತೆ, ಭದ್ರತೆ, ಜಾಗತಿನ ತಾಪಮಾನ ಈ ಎಲ್ಲಾ ವಿಚಾರಗಳಲ್ಲೂ ಭಾರತದ ಕಳಕಳಿಯನ್ನು ಒಬಾಮಾ ಮೆಚ್ಚಿಕೊಂಡಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ಕೂಡ ಮಾಡಿದ್ದಾರೆ. 2014ರ ಮೇನಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಅಮೆರಿಕದಿಂದ ಕರೆ ಮಾಡಿದ್ದ ಒಬಾಮಾ ಅವರನ್ನು ಅಭಿನಂದಿಸಿದ್ದರು, ಅಮೆರಿಕಕ್ಕೆ ಬರುವಂತೆ ಆಹ್ವಾನಿಸಿದ್ದರು. 2014ರ ಸಪ್ಟೆಂಬರ್ ನಲ್ಲಿ ಮೋದಿ ಹಾಗೂ ಒಬಾಮಾ ಮೊದಲ ಬಾರಿಗೆ ಭೇಟಿ ಮಾಡಿದ್ದರು. ಅದಾದ ಮೇಲೆ ಉಭಯ ನಾಯಕರು 8 ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...