alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿರೇಕದ ಸೆಕ್ಸ್ ಗೆ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ಲು ಮಹಿಳೆ…!

ಒತ್ತಡ ಹಾಗೂ ಗಂಭೀರ ಸಮಸ್ಯೆಯಿಂದ ಬಳಲುವ ಜನರು ಆತ್ಮಹತ್ಯೆಗೆ ಮುಂದಾಗ್ತಾರೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬಳು ವಿಚಿತ್ರ ಕಾರಣಕ್ಕೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಳು. ಆಕೆ ಆತ್ಮಹತ್ಯೆ ನಿರ್ಧಾರಕ್ಕೆ ಬರಲು ಕಾರಣವಾಗಿದ್ದು ಸೆಕ್ಸ್.

ಅಮೆರಿಕಾದ ಟೆಕ್ಸಾಸ್ ನಿವಾಸಿ ಜೆಸ್ ಡೌನಿ ನಿಂಫೋಮಾನಿಯಾ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಮಹಿಳೆಯಲ್ಲಿ ಕಾಡುವ ಈ ಕಾಯಿಲೆಯಲ್ಲಿ ಮಹಿಳೆಯರ ಸೆಕ್ಸ್ ಇಚ್ಛೆ ಅತಿರೇಕದಲ್ಲಿರುತ್ತದೆ. ಸೆಕ್ಸ್ ವ್ಯಸನಿ ಎಂದು ಅವರನ್ನು ಕರೆಯುತ್ತಾರೆ. ಜೆಸ್ ಡೌನಿ ತನ್ನ ನೋವಿನ ದಿನಗಳನ್ನು ಯುಟ್ಯೂಬ್ ನಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾಳೆ.

ಐದು ವರ್ಷದವಳಿದ್ದಾಗಲೇ ಜೆಸ್ ತಂದೆಯಿಂದ ಲೈಂಗಿಕ ಶೋಷಣೆಗೊಳಗಾಗಿದ್ದಳಂತೆ. ಚಿಕ್ಕವಳಿರುವಾಗಲೇ ಆಕೆಗೆ ಈ ರೋಗ ಶುರುವಾಗಿತ್ತಂತೆ. ತನ್ನ ಚಟ ತೀರಿಸಿಕೊಳ್ಳಲು ಚಡಪಡಿಸುತ್ತಿದ್ದಳಂತೆ. ಆರಂಭದಲ್ಲಿ ಇದೊಂದು ರೋಗ ಎಂಬುದು ಜೆಸ್ ಗೆ ತಿಳಿಯಲಿಲ್ಲವಂತೆ. ಪರಿಸ್ಥಿತಿ ಗಂಭೀರವಾಗ್ತಿದ್ದಂತೆ ಜೆಸ್ ಇದ್ರಿಂದ ಸಾಕಷ್ಟು ತೊಂದರೆ ಅನುಭವಿಸಿದಳಂತೆ.

ಕೆಲಸ ಕೂಡ ಕಳೆದುಕೊಂಡಳಂತೆ. ತನ್ನ ಖಾಯಿಲೆಗೆ ತಾನೇ ಅಂತ್ಯ ಹಾಡಬೇಕೆಂಬ ನಿರ್ಧಾರಕ್ಕೆ ಬಂದ ಜೆಸ್ ತಜ್ಞರ ಸಲಹೆ ಪಡೆಯಲು ಶುರುಮಾಡಿದಳಂತೆ. ಸ್ವಯಂ ನಿಯಂತ್ರಣ ಕಲಿತಳಂತೆ. ತುಂಬಾ ದಿನ ಸೆಕ್ಸ್ ನಿಂದ ದೂರವಿದ್ದು ಊರೂರು ಸುತ್ತಲು ಶುರುಮಾಡಿದಳಂತೆ. ಈಗ ಜೆಸ್ ಖಾಯಿಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆಯಂತೆ. ಸದ್ಯ ಇಂಥ ಖಾಯಿಲೆಯಿಂದ ಬಳಲುತ್ತಿರುವವರ ಸಹಾಯ ಮಾಡ್ತಿದ್ದಾಳಂತೆ ಜೆಸ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...