alex Certify
ಕನ್ನಡ ದುನಿಯಾ       Mobile App
       

Kannada Duniya

ಡೊನಾಲ್ಡ್ ಟ್ರಂಪ್ ವಿರುದ್ಧ ಹೆಚ್ಚಿದ ಆಕ್ರೋಶ

Protesters gather at JFK International Airport against Donald Trump's executive order on January 28, 2017 in New York. US President Donald Trump has signed a sweeping executive order to suspend refugee arrivals and impose tough controls on travellers from Iran, Iraq, Libya, Somalia, Sudan, Syria and Yemen. Trump boasted Saturday that his "very strict" crackdown on Muslim immigration was working "very nicely," amid mounting resistance to the order which has been branded by many as blatantly discriminatory. / AFP / Bryan R. Smith (Photo credit should read BRYAN R. SMITH/AFP/Getty Images)

ನ್ಯೂಯಾರ್ಕ್: ‘ವಿದೇಶಿ ಭಯೋತ್ಪಾದಕರ ಪ್ರವೇಶದಿಂದ ಅಮೆರಿಕ ರಕ್ಷಣೆ’ ಹೆಸರಿನಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊಸ ವಲಸೆ ನೀತಿ ಜಾರಿಗೆ ತಂದಿದ್ದಾರೆ.

ಮುಸ್ಲಿಂ ಬಾಹುಳ್ಯವಿರುವ 7 ರಾಷ್ಟ್ರಗಳ ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸಿರಿಯಾ ನಾಗರಿಕರಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಇರಾನ್, ಇರಾಕ್, ಸೂಡಾನ್, ಲಿಬಿಯಾ, ಯೆಮನ್, ಸೋಮಾಲಿಯಾ ನಾಗರಿಕರಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಈ ನಿಯಮ ವಿವಾದಕ್ಕೆ ಕಾರಣವಾಗಿದೆ. ಗೂಗಲ್ ಸಿ.ಇ.ಒ. ಸುಂದರ್ ಪಿಚೈ, ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರು ಆದೇಶದ ಬಗ್ಗೆ ಟೀಕಿಸಿದ್ದಾರೆ.

ಅಮೆರಿಕದಲ್ಲಿ ಉದ್ಯೋಗಿಗಳಾಗಿದ್ದು, ಈಗ ಹೊರ ದೇಶಗಳಿಗೆ ಹೋದ ಸಿಬ್ಬಂದಿಗೆ ಮರು ಪ್ರವೇಶ ಕಷ್ಟವಾಗಿದೆ. ಇದೇ ರೀತಿ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಮುಸ್ಲಿಂ ರಾಷ್ಟ್ರಗಳಿಂದ ಬಂದವರನ್ನು ತಡೆಯಲಾಗಿದೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಏರ್ ಪೋರ್ಟ್ ನಲ್ಲೇ ಪ್ರತಿಭಟನೆ ನಡೆಸಲಾಗಿದೆ.

ಡೊನಾಲ್ಡ್ ಟ್ರಂಪ್ ನೀತಿ ಮತ್ತು ಭದ್ರತಾ ಸಿಬ್ಬಂದಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ನ್ಯೂಯಾರ್ಕ್ ವಿಮಾನ ನಿಲ್ದಾಣ ಪ್ರತಿಭಟನಾ ಸ್ಥಳವಾಗಿ ಮಾರ್ಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...