alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ದೆಹಲಿಗೆ ಬರ್ತಿದ್ದ ಮಹಿಳೆ ಜೊತೆ ನಡೀತು ಇಂಥ ಘಟನೆ….

ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕಿರುಕುಳ,  ದೌರ್ಜನ್ಯ ಪ್ರಕರಣಗಳು ದಿನ ದಿನಕ್ಕೂ ಹೆಚ್ಚಾಗ್ತಿದೆ. ವಿಮಾನದಲ್ಲಿಯೂ ಇಂಥ ಘಟನೆಗಳು ವರದಿಯಾಗ್ತಿವೆ. ಇಸ್ತಾಬುಲ್ ನಿಂದ ದೆಹಲಿಗೆ ಬರ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಶ್ಲೀಲವಾಗಿ ವರ್ತಿಸಿದ್ದಾನೆ.

ಮಹಿಳೆ ಪಕ್ಕದಲ್ಲಿ ಕುಳಿತಿದ್ದ ಕಾಮುಕ ಅಶ್ಲೀಲ ವರ್ತನೆ ಮಾಡಿದ್ದಾನಂತೆ. ಇದನ್ನು ನೋಡಿ ದಂಗಾದ ಮಹಿಳೆ ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾಳೆ. ದೂರಿನ ಮೇಲೆ ಆರೋಪಿ ಸೀಟನ್ನು ಸಿಬ್ಬಂದಿ ಬದಲಿಸಿದ್ದಾರೆ. ಐಜಿಐ ವಿಮಾನ ನಿಲ್ದಾಣಕ್ಕೆ ಬರ್ತಿದ್ದಂತೆ ವಿಮಾನ ನಿಲ್ದಾಣ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿ ಪ್ರಯಾಣಿಕನ ಬಳಿ ರಷ್ಯಾದ ಪಾಸ್ಪೋರ್ಟ್ ಇದೆ. ವಿಚಾರಣೆ ನಂತ್ರ ಜಾಮೀನಿನ ಮೇಲೆ ಆರೋಪಿಯನ್ನು ಬಿಡಲಾಗಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...