alex Certify
ಕನ್ನಡ ದುನಿಯಾ       Mobile App
       

Kannada Duniya

ಗುಂಡಿನ ದಾಳಿಗೆ ಅನಿವಾಸಿ ಭಾರತೀಯ ಬಲಿ

ಅಮೆರಿಕಾದ ನಾರ್ತ್ ಕೆರೋಲಿನಾದಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಅನಿವಾಸಿ ಭಾರತೀಯರೊಬ್ಬರು ಬಲಿಯಾಗಿದ್ದಾರೆ. ಗುಜರಾತ್ ನ ಅನಂದ್ ನಿವಾಸಿ ರಮೇಶ್ ತಲಾಟಿ ಎಂಬವರ ಪುತ್ರ ಆಕಾಶ್ ತಲಾಟಿ ಮೃತಪಟ್ಟ ದುರ್ದೈವಿ.

ನಾರ್ತ್ ಕೆರೋಲಿನಾದಲ್ಲಿ ಹೋಟೆಲ್ ನಡೆಸುತ್ತಿದ್ದ ಆಕಾಶ್ ತಲಾಟಿ, ಶನಿವಾರದಂದು ಹೋಟೆಲ್ ನಲ್ಲಿದ್ದ ವೇಳೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಒಳ ನುಗ್ಗಿದ್ದು, ಹಣ ದೋಚಲು ಮುಂದಾದಾಗ ಆಕಾಶ್ ಅದಕ್ಕೆ ಪ್ರತಿರೋಧ ಒಡ್ಡಿದರೆಂದು ಹೇಳಲಾಗಿದೆ. ಈ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಆಕಾಶ್ ತಲಾಟೆ ಬಲಿಯಾಗಿದ್ದಾರೆ. ಹೋಟೆಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿ ಸಹ ಗಾಯಗೊಂಡಿದ್ದು, ಈ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಆನಂದ್ ಆರ್ಟ್ಸ್ ಕಾಲೇಜ್ ನ ಮಾಜಿ ಪ್ರಾಂಶುಪಾಲ ರಮೇಶ್ ತಲಾಟಿಯವರ ಪುತ್ರ ಆಕಾಶ್ ತಲಾಟಿ, ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಬಳಿಕ 10 ವರ್ಷಗಳ ಹಿಂದೆ ಅಮೆರಿಕಾಕ್ಕೆ ತೆರಳಿ ಉದ್ಯಮ ಆರಂಭಿಸಿದ್ದರೆನ್ನಲಾಗಿದೆ. ಆಕಾಶ್ ತಲಾಟಿ, ಪತ್ನಿ ಮಿತಾಲ್ ಹಾಗೂ 8 ವರ್ಷದ ಪುತ್ರ ಜಯ್ ನನ್ನು ಆಗಲಿದ್ದು, ಆಕಾಶ್ ತಲಾಟಿಯ ಹತ್ಯೆಯಿಂದ ಕುಟುಂಬ ಆಘಾತಕ್ಕೊಳಗಾಗಿದೆ. 2018 ರ ಜನವರಿಯಲ್ಲಿ ಭಾರತಕ್ಕೆ ಬರಲು ಆಕಾಶ್ ತಲಾಟಿ ಸಿದ್ದತೆ ನಡೆಸಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...