alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಲವರ್ ಮನೆಗೆ ಬಂದವನಿಂದ ಹೇಯ ಕೃತ್ಯ

nir

ಸ್ಯಾನ್ ಫ್ರಾನ್ಸಿಸ್ಕೋ: ತಮ್ಮ ಪುತ್ರಿಯ ಮಾಜಿ ಪ್ರಿಯಕರನಿಂದಲೇ ಅನಿವಾಸಿ ಭಾರತೀಯ ದಂಪತಿ ಹತ್ಯೆಗೀಡಾಗಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಸವಾಗಿದ್ದ ನರೇನ್ ಪ್ರಭು ದಂಪತಿ ಕೊಲೆಯಾದವರು. ಅವರ ಪುತ್ರಿ ರಚೇಲ್ ಪ್ರಭು ಕೆಲವು ತಿಂಗಳ ಹಿಂದೆ ಪ್ರಿಯಕರ ಮಿರ್ಜಾ ಟಾಟಿಕ್ ನಿಂದ ದೂರವಾಗಿದ್ದಳು.

ಇದರಿಂದ ಆಕ್ರೋಶಗೊಂಡ ಮಿರ್ಜಾ ಏಕಾಏಕಿ ಮನೆಗೆ ನುಗ್ಗಿದ್ದಾನೆ. ನರೇನ್ ಪ್ರಭು ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದು, ಪತ್ನಿ ಮತ್ತು ಮಗನನ್ನು ಒತ್ತೆಯಾಗಿಟ್ಟುಕೊಂಡಿದ್ದಾನೆ.

ಸುದ್ದಿ ತಿಳಿದ ಸ್ಯಾನ್ ಫ್ರಾನ್ಸಿಸ್ಕೋ ಪೊಲೀಸರು ಮನೆಯನ್ನು ಸುತ್ತವರೆದಿದ್ದು, ಇದನ್ನು ಗಮನಿಸಿದ ಮಿರ್ಜಾ ನರೇನ್ ಪತ್ನಿಯನ್ನೂ ಕೊಂದಿದ್ದಾನೆ.

ಕೂಡಲೇ ಒಳ ನುಗ್ಗಿದ ಪೊಲೀಸರು ಗುಂಡಿಟ್ಟು ಮಿರ್ಜಾನನ್ನು ಹತ್ಯೆ ಮಾಡಿ, ನರೇನ್ ಪುತ್ರನನ್ನು ಪಾರು ಮಾಡಿದ್ದಾರೆ. ಈ ಸಂದರ್ಭದಲ್ಲಿ ರಚೇಲ್ ಮನೆಯಲ್ಲಿರಲಿಲ್ಲ. ಹೀಗೆ ಮಿರ್ಜಾ ಮಾಜಿ ಪ್ರಿಯತಮೆಯ ತಂದೆ, ತಾಯಿಯನ್ನು ಕೊಂದು ತಾನೂ ಬಲಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...