alex Certify
ಕನ್ನಡ ದುನಿಯಾ       Mobile App
       

Kannada Duniya

Kit Kat ಕ್ಯಾಂಡಿ ಬಾರ್ ಗಾಗಿ ನಡೆದಿತ್ತಲ್ಲಿ ಕಳ್ಳತನ !

kitkat-thiefಈ ಸುದ್ದಿಯನ್ನು ಓದಿದ ಬಳಿಕ ನಿಮ್ಮ ವಾಹನದಲ್ಲಿ ಕಣ್ಣಿಗೆ ಕಾಣುವಂತಹ ಯಾವುದೇ ವಸ್ತುಗಳನ್ನು ಬಿಡಲು ಹತ್ತು ಬಾರಿ ಯೋಚ್ನೆ ಮಾಡ್ತೀರಿ. ಕಳ್ಳತನವಾಗೋದು ಕೇವಲ ಬೆಲೆ ಬಾಳುವ ವಸ್ತುಗಳಿಗಾಗಿ ಮಾತ್ರವಲ್ಲಿ ಎಂಬುದು ಈ ಮೂಲಕ ನಿರೂಪಿತವಾಗಿದೆ.

ಅಮೆರಿಕಾದ ಕನ್ಸಾಸ್ ನಲ್ಲಿ ಈ ತಮಾಷೆಯ ಘಟನೆ ನಡೆದಿದ್ದು, ಕನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ವಿದ್ಯಾರ್ಥಿ ಜಾಬಿನ್ಸ್ ಕಾರ್ಯ ನಿಮಿತ್ತ ಹೊರಗಡೆ ಹೋಗಿದ್ದವನು ಕೇವಲ 15 ನಿಮಿಷಗಳ ಕಾಲ ತನ್ನ ಕಾರನ್ನು ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಿದ್ದ.

ಆತ ವಾಪಾಸ್ ಬಂದು ನೋಡಿದಾಗ ಅಚ್ಚರಿ ಕಾದಿತ್ತು. ನ್ಯಾಪ್ಕೀನ್ ಒಂದರ ಮೇಲೆ ತನ್ನ ಸಂದೇಶ ಬರೆದಿದ್ದ ಕಳ್ಳ ‘ನಿಮ್ಮ ಕಾರಿನ ಡ್ಯಾಶ್ ಬೋರ್ಡ್ ಮೇಲೆ ನನಗೆ ಕಿಟ್ ಕ್ಯಾಟ್ ಕ್ಯಾಂಡಿ ಬಾರ್ ಕಂಡಿತ್ತು. ನನಗೆ ಕಿಟ್ ಕ್ಯಾಟ್ ಅಂದ್ರೆ ಇಷ್ಟ. ಅಲ್ಲದೇ ನಿಮ್ಮ ಕಾರ್ ಲಾಕ್ ಸಹ ಮಾಡಿರಲಿಲ್ಲ. ಹಸಿವಾಗಿದ್ದ ನಾನು ಕಿಟ್ ಕ್ಯಾಟ್ ಕ್ಯಾಂಡಿ ಬಾರ್ ತೆಗೆದುಕೊಂಡಿದ್ದೇನೆ. ಬೇರೇನನ್ನೂ ಮುಟ್ಟಿಲ್ಲವೆಂದು’ ಬರೆದಿಟ್ಟಿದ್ದಾನೆ. ಜಾಬಿನ್ಸ್, ಕಿಟ್ ಕ್ಯಾಟ್ ಕಳ್ಳನ ಸಂದೇಶವನ್ನು ಟ್ವೀಟ್ ಮಾಡಿದ್ದು, ಅದೀಗ ಹಲವು ಕಮೆಂಟ್ ಗಳಿಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...