alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಿ ವಿದ್ಯಾರ್ಥಿನಿಯ ನೂಡಲ್ಸ್ ನಲ್ಲಿತ್ತು ಹಾವು..!

snake-in-noodles-china_650x400_61498047964ಚೀನಾದ ಗುಯಾಂಕ್ಸಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ತಾನು ಖರೀದಿಸಿದ್ದ ನೂಡಲ್ಸ್ ನೋಡಿ ಬೆಚ್ಚಿ ಬಿದ್ದಿದ್ದಾಳೆ. ವಿಶ್ವವಿದ್ಯಾನಿಲಯದ ಆವರಣದಲ್ಲೇ ಇದ್ದ ಕ್ಯಾಂಟೀನ್ ನಲ್ಲಿ ನೂಡಲ್ಸ್ ಆರ್ಡರ್ ಮಾಡಿದ್ದ ಆಕೆ ಸರ್ವರ್ ಅದನ್ನು ತಂದಿಟ್ಟ ವೇಳೆ ಒಂದೆರೆಡು ತುತ್ತು ತಿಂದ ಆಕೆ ಮತ್ತೊಂದು ತುತ್ತು ಕೈಗೆತ್ತಿಕೊಳ್ಳುವಾಗ ಸತ್ತ ಹಾವಿನ ಮರಿಯೊಂದು ಕಂಡು ಬಂದಿದೆ.

ಇದನ್ನು ಕಂಡು ಕಂಗಾಲಾದ ವಿದ್ಯಾರ್ಥಿನಿ ಬಳಿಕ ಸಾವರಿಸಿಕೊಂಡು ತನ್ನ ಮೊಬೈಲ್ ನಲ್ಲಿ ಫೋಟೋ ತೆಗೆದು ವಿ ಚಾಟ್ ನಲ್ಲಿ ಅಪ್ ಲೋಡ್ ಮಾಡಿದ್ದು, ಕ್ಷಣಾರ್ಧದಲ್ಲೇ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಚಾರ ಆಹಾರ ಇಲಾಖೆಯ ಗಮನಕ್ಕೂ ಬಂದಿದ್ದು, ಅಧಿಕಾರಿಗಳು ಕ್ಯಾಂಟೀನ್ ಗೆ ತೆರಳಿ ಪರಿಶೀಲಿಸಿದ ವೇಳೆ ಗುಣಮಟ್ಟ ಕಾಪಾಡಿಕೊಂಡು ಬರದಿರುವುದು ಕಂಡು ಬಂದಿದೆ. ಇದೀಗ ಕ್ಯಾಂಟೀನ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕ್ಯಾಂಟೀನ್ ಮಾಲೀಕ ಮಾತ್ರ ನಾವು ತಯಾರಿಸಿದ್ದ ಆಹಾರದಲ್ಲಿ ಈ ಪ್ರಮಾದವಾಗಿಲ್ಲವೆಂದು ಪ್ರತಿಪಾದಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...