alex Certify
ಕನ್ನಡ ದುನಿಯಾ       Mobile App
       

Kannada Duniya

ವಿರೋಧ ಲೆಕ್ಕಿಸದ ಉತ್ತರ ಕೊರಿಯಾದಿಂದ ಯಶಸ್ವಿ ರಾಕೆಟ್ ಉಡಾವಣೆ

north-korea-rocket-launch-afp_650x400_61454826787

ಅಮೆರಿಕ ಸೇರಿದಂತೆ ವಿಶ್ವದ ಬಲಾಡ್ಯ ರಾಷ್ಟ್ರಗಳ ಭಾರೀ ವಿರೋಧದ ನಡುವೆಯೂ ಉತ್ತರ ಕೊರಿಯಾ, ಭಾನುವಾರ ರಾಕೆಟ್ ಉಡಾವಣೆ ಮಾಡುವ ಮೂಲಕ ವಿಶ್ವದ ಪ್ರಭಾವಿ ದೇಶಗಳಿಗೆ ಸೆಡ್ಡು ಹೊಡೆದಿದೆ.

ಹೌದು. ಈ ಹಿಂದೆ ಉತ್ತರ ಕೊರಿಯಾ ರಾಕೆಟ್ ಉಡಾವಣೆ ನಡೆಸುತ್ತದೆ ಎಂಬ ಮಾಹಿತಿ ಲಭಿಸುತ್ತಿದ್ದಂತೆ ಅಮೇರಿಕಾ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲ, ದಿಗ್ಭಂಧನ ವಿಧಿಸುವ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದವು. ಆದರೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಉತ್ತರ ಕೊರಿಯಾ ರಾಕೆಟ್ ಉಡಾವಣೆ ಮಾಡುವಲ್ಲಿ ಸಫಲವಾಗಿದೆ.

ಈ ಸ್ಥಳವು ಚೀನಾ ಜೊತೆಗಿನ ವಾಯವ್ಯ ಗಡಿಗೆ ಸಮೀಪದಲ್ಲಿದೆ. ಇದು ಖಂಡಾಂತರ ಸಮರ ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಯ ಭಾಗವಾಗಿದ್ದು ಭಾರಿ ಪ್ರಚೋದನೆ ನೀಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...