alex Certify
ಕನ್ನಡ ದುನಿಯಾ       Mobile App
       

Kannada Duniya

OMG: ಇದು ಡ್ರೆಸ್ಸಾ ಅಥವಾ ಪಿಜ್ಜಾನಾ ನೀವೇ ಹೇಳಿ

pizza_650x400_51493693767

ಪಿಜ್ಜಾ ಯಾರಿಗೆ ಇಷ್ಟವಿಲ್ಲ ಹೇಳಿ. ಟಿವಿಯಲ್ಲಿ ಪಿಜ್ಜಾ ಜಾಹಿರಾತು ನೋಡಿದ್ರೂ ಕೆಲವರ ಬಾಯಲ್ಲಿ ನೀರು ಬರುತ್ತೆ. ಯೋಚನೆ ಮಾಡಿ ನಿಮ್ಮ ಡ್ರೆಸ್ ಪಿಜ್ಜಾ ರೀತಿಯಲ್ಲಿದ್ದರೆ ಹೇಗಾಗಬೇಡ? ಕೇಳಲು ಇದು ಸ್ವಲ್ಪ ವಿಚಿತ್ರವೆನಿಸಬಹುದು. ಆದ್ರೆ ಉತ್ತರ ಕೆರೊಲಿಯಾದಲ್ಲಿ ಪಿಜ್ಜಾ ರೀತಿಯ ಡ್ರೆಸ್ ವಿನ್ಯಾಸಗೊಳಿಸಲಾಗಿದೆ.

ಒಲಿವಿಯಾ ಮೆಯರ್ಸ್ ಈ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ. ಈ ಡ್ರೆಸ್ ನ ವಿಡಿಯೋ ಹಾಗೂ ಫೋಟೋವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ವೈರಲ್ ಮಾಡಿದ್ದಾರೆ ಒಲಿವಿಯಾ. ಮಾಡೆಲ್ ಈ ಡ್ರೆಸ್ ಧರಿಸಿ ಮಲಗಿದ್ರೆ ದೊಡ್ಡ ಪಿಜ್ಜಾ ಇಟ್ಟಂತೆ ಕಾಣುತ್ತದೆ. ಪಿಜ್ಜಾದಲ್ಲಿ ಏನೆಲ್ಲ ಪದಾರ್ಥಗಳನ್ನು ಹಾಕಲಾಗುತ್ತದೆಯೋ ಅದೆಲ್ಲವೂ ಡ್ರೆಸ್ ನಲ್ಲಿ ನಿಮಗೆ ಕಾಣಸಿಗಲಿದೆ. ಕೆಲ ದಿನಗಳ ಹಿಂದೆ ಕೆಲ ಗಂಟೆಯೊಳಗೆ ಈ ಡ್ರೆಸ್ ವಿನ್ಯಾಸಗೊಳಿಸಲಾಗಿದೆ. ಡೊಮಿನೊ ಒಂದರ ಕಾರ್ಯಕ್ರಮಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆಯಂತೆ.

ಪಿಜ್ಜಾದ ಈ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಕಮೆಂಟ್ ಗಳು ಬರ್ತಾ ಇವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...