alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ನೋಕಿಯಾದ ಇನ್ನೊಂದು ಸ್ಮಾರ್ಟ್ಫೋನ್

ಹೆಚ್ಎಂಡಿ ಗ್ಲೋಬಲ್, ದುಬೈನಲ್ಲಿ ನೋಕಿಯಾ 8.1 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಅಕ್ಟೋಬರ್ ನಲ್ಲಿಯೇ ಚೀನಾದಲ್ಲಿ  ಈ ಮೊಬೈಲ್ ಬಿಡುಗಡೆಯಾಗಿತ್ತು. ಚೀನಾದಲ್ಲಿ ನೋಕಿಯಾ 8.1 ಸ್ಮಾರ್ಟ್ಫೋನ್ ನೋಕಿಯಾ ಎಕ್ಸ್ 7 ಹೆಸರಿನಲ್ಲಿ ಬಿಡುಗಡೆಯಾಗಿತ್ತು.

ನೋಕಿಯಾ 8.1 ಸ್ಮಾರ್ಟ್ಫೋನ್ ಆಂಡ್ರಾಯ್ಡ್ ಒನ್ ಪ್ರೋಗ್ರಾಂನ ಭಾಗವಾಗಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 6.18 ಇಂಚಿನ ಡಿಸ್ಪ್ಲೇ ಇದೆ. ಸ್ಮಾರ್ಟ್ ಫೋನ್ ಎರಡು ರಿಯರ್ ಕ್ಯಾಮರಾ ಹೊಂದಿದೆ. ನೋಕಿಯಾ 8.1 ಸ್ಮಾರ್ಟ್ಫೋನ್ ಬೆಲೆ 399 ಯುರೋ ( ಸುಮಾರು 31,900 ರೂ.) ಆಗಿದೆ. ಡಿಸೆಂಬರ್ ಕೊನೆ ವೇಳೆಗೆ ಮೊಬೈಲ್ ಗ್ರಾಹಕರ ಕೈ ಸೇರಲಿದೆ.

ಈ ಸ್ಮಾರ್ಟ್ಫೋನ್ 6 ಬಣ್ಣಗಳಲ್ಲಿ ಲಭ್ಯವಿದೆ. ಡಿಸೆಂಬರ್ 10ರಂದು ಭಾರತದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಕಂಪನಿ ಹೊಸ ಫೋನ್ ಬಿಡುಗಡೆ ಮಾಡಲಿದೆ. ಫೋನ್ ನಲ್ಲಿ 12 ಮೆಗಾಪಿಕ್ಸಲ್ ಹಾಗೂ 13 ಮೆಗಾಪಿಕ್ಸಲ್ ನ ಎರಡು ರಿಯರ್ ಕ್ಯಾಮರಾಗಳಿವೆ. ಸೆಲ್ಫಿಗಾಗಿ 20 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ಸ್ಮಾರ್ಟ್ಫೋನ್ ನಲ್ಲಿ 64 ಜಿಬಿ ಸ್ಟೋರೇಜ್ ನೀಡಲಾಗಿದ್ದು, ಅದನ್ನು 400 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...