alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಹೆಸರಿನಲ್ಲಿ ವಧುವಿನ ಸ್ನೇಹಿತೆಯರ ಮೇಲೆ ನಡೆಯುತ್ತೆ ಲೈಂಗಿಕ ಕಿರುಕುಳ…!

ಮದುವೆ ವೇಳೆ ವಧು-ವರರಿಗೆ ತಮಾಷೆ ಮಾಡುವುದು, ಸ್ನೇಹಿತರನ್ನು ಹಾಸ್ಯಕ್ಕೆ ಎಳೆಯುವುದು, ಸಣ್ಣಪುಟ್ಟ ತೊಂದರೆ ನೀಡುವುದು ಸಾಮಾನ್ಯ ಸಂಗತಿ. ಮದುವೆ ಸಮಾರಂಭದಿಂದ ಹಿಡಿದು ಮೊದಲ ರಾತ್ರಿಯವರೆಗೂ ಕೆಲವೊಂದು ಪದ್ಧತಿಗಳು ತಮಾಷೆಯಾಗಿ ನಡೆದು ಹೋಗುತ್ತವೆ. ಆದ್ರೆ ಚೀನಾದಲ್ಲಿ ತಮಾಷೆ ಪದ್ಧತಿಯೊಂದು ಗಂಭೀರ ಸ್ವರೂಪ ಪಡೆಯುತ್ತಿದೆ. ವಿಶ್ವವೇ ತಲೆ ತಗ್ಗಿಸುವ ಘಟನೆಗೆ ಸಾಕ್ಷಿಯಾಗ್ತಿದೆ.

ಚೀನಾದಲ್ಲಿ ನೋಹೌನ್ ಎಂಬ ಪದ್ಧತಿಯೊಂದಿದೆ. ಮಧುಚಂದ್ರದ ವೇಳೆ ವಧು-ವರರನ್ನು ತಮಾಷೆ ಮಾಡುವ ಸಂಪ್ರದಾಯವಿದು. ವಧು-ವರರ ಜೊತೆ ಅವ್ರ ಸ್ನೇಹಿತೆಯರನ್ನೂ ಈ ಸಮಯದಲ್ಲಿ ತಮಾಷೆ ಮಾಡಲಾಗುತ್ತದೆ. ಆದ್ರೆ ಹಳೆ ಕಾಲದಲ್ಲಿ ಕೇವಲ ಪದ್ಧತಿಯಾಗಿದ್ದ ನೋಹೌನ್ ಈಗ ಲೈಂಗಿಕ ಕಿರುಕುಳವಾಗಿ ಬದಲಾಗಿದೆ.

ಮಾರ್ಚ್ ನಲ್ಲಿ ಚೀನಾದ ನಟ ಬಾವೋ ಬೆರಿಅರ್ ಹಾಗೂ ನಟಿ ಬಾವೋ ವೆಂಕ್ವಾಯ್ನ್ ಮದುವೆ ನೆರವೇರಿತ್ತು. ಈ ಮದುವೆಯ ವಿಡಿಯೋವೊಂದು ಎಲ್ಲರ ಚರ್ಚೆಗೆ ಕಾರಣವಾಗಿತ್ತು. ನಟಿಯ ಸ್ನೇಹಿತೆ ಲಿಯು ಯಾನ್ ಎಂಬಾಕೆಯನ್ನು ಐದು ಮಂದಿ ಪುರುಷರು ಹಿಡಿದುಕೊಂಡು ಈಜುಕೊಳಕ್ಕೆ ಎಸೆಯಲು ಪ್ರಯತ್ನಿಸಿದ್ದರು. ಲಿಯು ಅಳ್ತಿದ್ದಳು. ಮತ್ತೊಬ್ಬ ಸ್ನೇಹಿತೆ ಆಕೆಯನ್ನ ರಕ್ಷಿಸಿದ್ದಳು. ಈ ವಿಡಿಯೋ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಕೆಲವರು ಲಿಯು ಮೇಲೆಯೇ ಆರೋಪ ಹೊರಿಸಿದ್ದರು.

ವಿಷ್ಯ ಇಷ್ಟೇ ಅಲ್ಲ ಮೆರವಣಿಗೆ ವೇಳೆ ಸ್ನೇಹಿತೆಯರು ಸಂಭೋಗದ ಸಂಗತಿಯನ್ನು ನಾಟಕವಾಡಿ ತೋರಿಸಬೇಕು. ಆದ್ರೆ ನಾಟಕ ಎಂಬುದು ಈಗ ಮರೆಯಾಗ್ತಿದೆ. ಎಲ್ಲರೆದುರು ಮಧುವಿನ ಸ್ನೇಹಿತೆಯರ ಮೇಲೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...