alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಜೈಲುಗಳಲ್ಲಿ ಗಾಳಿ, ಬೆಳಕು ಬರುವುದಿಲ್ಲವೆಂದ ವಿಜಯ್ ಮಲ್ಯ

ಕೋಟಿಗಟ್ಟಲೆ ಸಾಲ ಪಡೆದು, ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್‌ ಮಲ್ಯ, ಭಾರತದ ಜೈಲುಗಳು ಸರಿಯಾಗಿಲ್ಲ ಎಂದು ಇಂಗ್ಲೆಂಡ್‌ನ ನ್ಯಾಯಾಲಯಕ್ಕೆ ಹೇಳಿದ್ದಾರೆ.

ಲಂಡನ್‌ನ ವೆಸ್ಟ್‌ಮಿನ್ಸ್‌ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಜಯ್‌ ಮಲ್ಯ ಅವರ ಬ್ಯಾಂಕ್‌ಗಳಿಗೆ ವಂಚನೆ ಪ್ರಕರಣದ ಕುರಿತು ವಿಚಾರಣೆ ನಡೆದಿದೆ. ದೇಶದ ಜೈಲುಗಳ ಒಳಗೆ ಸರಿಯಾಗಿ ಗಾಳಿ ಬೆಳಕು ಬರುವುದಿಲ್ಲ ಎಂದು ವಿಜಯ್‌ ಮಲ್ಯ ದೂರಿದ್ದಾರೆ.

ಇದಕ್ಕೆ ಇಂಗ್ಲೆಂಡ್‌ ನ್ಯಾಯಾಧೀಶರು, ಮುಂಬಯಿನ ಅರ್ಥರ್ ರಸ್ತೆಯ ಕೇಂದ್ರೀಯ ಕಾರಾಗೃಹದ ಕೊಠಡಿಗಳ ವಿಡಿಯೋ ಕಳಿಸುವಂತೆ ಭಾರತಕ್ಕೆ ಹೇಳಿದ್ದಾರೆ. ವಿಚಾರಣೆಯನ್ನು ಸೆ.12 ಕ್ಕೆ ಮುಂದೂಡಿರುವ ಇಂಗ್ಲೆಂಡ್‌ ಕೋರ್ಟ್‌, ಈಗಾಗಲೇ ಭಾರತ ಕಳುಹಿಸಿರುವ ಚಿತ್ರಗಳ ಆಧಾರದಲ್ಲಿ ಮಲ್ಯ ಅವರನ್ನು ಕಳುಹಿಸುವುದು ಸಾಧ್ಯವಾಗದು. ಜೈಲಿನ ಕೊಠಡಿಗಳ ವಿಡಿಯೋ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಹಗಲು ಹೊತ್ತಿನಲ್ಲಿ ತೆಗೆದ ವಿಡಿಯೋಗಳನ್ನು ಕಳುಹಿಸಬಹುದೇ? ಸ್ವಚ್ಛ ಗಾಳಿ ಬೆಳಕು ಬರುತ್ತಿವೆಯೇ ಎಂಬುದನ್ನು ಗಮನಿಸಬೇಕಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಮಲ್ಯ ಅವರ ವಕೀಲರು, ಜೈಲುಗಳ ಒಳಕ್ಕೆ ಗಾಳಿ, ಬೆಳಕು ಬರುವುದೇ ಇಲ್ಲ. ಅಷ್ಟು ದೊಡ್ಡ ಗೋಡೆಗಳಿರುವಾಗ ಗಾಳಿ ಓಡಾಡುವುದು ಹೇಗೆ? ಎಂದು ವಾದಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತದ ಪರ ವಕೀಲರು, ವಿಜಯ್‌ ಮಲ್ಯ ಅವರನ್ನು ವಿದೇಶಿ ಶೌಚದ ವ್ಯವಸ್ಥೆ, ಗಾಳಿ ಬೆಳಕು ಸರಿಯಾಗಿ ಇರುವ ಜೈಲಿನಲ್ಲೇ ಇರಿಸಲಾಗುತ್ತದೆ. ಅಲ್ಲದೆ ಎಲ್ಲ ಜೈಲುಗಳನ್ನು ಮಾನವ ಹಕ್ಕುಗಳ ಆಯೋಗದ ನಿಯಮಾವಳಿಗಳ ಪ್ರಕಾರವೇ ರಚಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ.
ವಾದಗಳನ್ನು ಆಲಿಸಿದ ಕೋರ್ಟ್‌, ವಿಡಿಯೋ ದಾಖಲೆ ನೀಡುವಂತೆ ಹೇಳಿ, ವಿಚಾರಣೆ ಮುಂದೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...