alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ ದ್ವೀಪಕ್ಕೆ ಪುರುಷರಿಗಿಲ್ಲ ಪ್ರವೇಶ…!

ಇಂದು ಮಹಿಳೆ ಯಾವುದರಲ್ಲೂ ಕಮ್ಮಿಯಿಲ್ಲ. ಅದಕ್ಕೆ ಅನ್ವರ್ಥವಾಗಿ ಮಹಿಳೆಯರಿಗಾಗಿಯೇ ದ್ವೀಪವೊಂದು ನಿರ್ಮಾಣವಾಗುತ್ತಿದೆ. ಇದು ಕೇವಲ ಮಹಿಳೆಯರಿಗೆ ಮಾತ್ರ. ಇದರಲ್ಲಿ ಪುರುಷರಿಗೆ ಪ್ರವೇಶವೇ ಇಲ್ಲ. ಈ ದ್ವೀಪವನ್ನು ವಾಣಿಜ್ಯೋದ್ಯಮಿ ಕ್ರಿಶ್ಟಿನಾ ರೋಥ್ ಎಂಬುವವರು ನಿರ್ಮಿಸುತ್ತಿದ್ದಾರೆ.

ಫಿನ್ ಲ್ಯಾಂಡ್ ನ ಬೆಲ್ಟಿಕ್ ಸಮುದ್ರದಲ್ಲಿ ಈ ದ್ವೀಪ ನಿರ್ಮಾಣವಾಗುತ್ತಿದ್ದು, ಇದಕ್ಕೆ ಸುಪರ್ ಶಿ ಎಂದು ಹೆಸರಿಡಲಾಗಿದೆ. ಸುತ್ತಲೂ ಸಮುದ್ರದ ನೀರು ಜೊತೆಗೆ ಚೆಂದದ ಹಸಿರಿನ ಪ್ರದೇಶದಿಂದ ತುಂಬಿರುವ ಸುಪರ್ ಶಿ ಸುಮಾರು 8.4 ಎಕರೆ ಪ್ರದೇಶದಷ್ಟು ವಿಸ್ತೀರ್ಣ ಹೊಂದಿದೆ.

ರೋಥ್ ಈ ದ್ವೀಪ ಖರೀದಿಗೂ ಮುನ್ನ ಜಗತ್ತಿನಾದ್ಯಂದ ಇರುವ ಸುಪರ್ ವುಮೆನ್ ಗಳಿಗಾಗಿ ಸುಪರ್ ಶಿ ಅನ್ನೋ ಗ್ರೂಪ್ ಮಾಡಿದ್ದರು. ಇಲ್ಲಿ ಜೀವನದಲ್ಲಿ ಒಳ್ಳೆಯ ಅನುಭವಕ್ಕೆ ಬೇಕಾದ ಫಿಟ್ ನೆಸ್, ಬ್ಯೂಟಿ, ಫ್ಯಾಷನ್, ಧ್ಯಾನ, ಆಧ್ಯಾತ್ಮದಂತಹ ವಿಷಯಗಳನ್ನು ಹೊಂದಬಹುದು ಎಂದಿದ್ದರು. ಈ ದ್ವೀಪದಲ್ಲಿ ಉಳಿದ ಐಶಾರಾಮಿ ರೆಸಾರ್ಟ್ ಗಳಂತೆಯೇ ಸ್ಪಾ ಮುಂತಾದ ಸೌಲಭ್ಯಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...