alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಐಷಾರಾಮಿ ರೆಸಾರ್ಟ್ ಗೆ ಪುರುಷರಿಗಿಲ್ಲ ಎಂಟ್ರಿ

ಮಹಿಳೆಯರಿಗಿಂತ ಪುರುಷರೇ ಮುಂದು ಅನ್ನೋ ಮಾತಿದೆ. ಅಷ್ಟೇ ಅಲ್ಲ ಲಿಂಗ ತಾರತಮ್ಯ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಇದೆ. ಅದೆಷ್ಟೋ ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶವೇ ಇಲ್ಲ. ಆದ್ರೆ ಫಿನ್ ಲ್ಯಾಂಡ್ ನಲ್ಲೊಂದು ನೋ ಮ್ಯಾನ್ಸ್ ಲ್ಯಾಂಡ್ ಇದೆ.

ಅಲ್ಲಿ ಪುರುಷರಿಗೆ ನೋ ಎಂಟ್ರಿ. ಸೂಪರ್ ಶಿ ಅನ್ನೋದು ಈ ಐಷಾರಾಮಿ ರೆಸಾರ್ಟ್ ಹೆಸರು. ಕೇವಲ ಮಹಿಳೆಯರಿಗೆ ಮೀಸಲಾಗಿರುವ ವೆಕೇಶನ್ ಡೆಸ್ಟಿನೇಶನ್ ಇದು. ಮಹಿಳೆಯರು ಮಾತ್ರ ಇಲ್ಲಿ ರಜೆಯ ಮಜಾ ಅನುಭವಿಸಲು ಅವಕಾಶವಿದೆ.

ಇಲ್ಲಿ ಸ್ವಿಮ್ ಮಾಡಬಹುದು, ಡಾನ್ಸ್ ಮಾಡಬಹುದು. ಜಗತ್ತಿನ ಪರಿವೆಯಿಲ್ಲದೇ ಎಂಜಾಯ್ ಮಾಡಲು ಅವಕಾಶವಿದೆ. ಮಹಿಳೆಯರಿಗೂ ಅವರದ್ದೇ ಆದ ಕನಸು, ಆಸೆಗಳಿರುತ್ತವೆ. ಅದನ್ನು ಈಡೇರಿಸಿಕೊಳ್ಳಲೆಂದೇ ಇರುವ ಸ್ಥಳ ಇದು. ಜೂನ್ ನಲ್ಲಿ ಈ ರೆಸಾರ್ಟ್ ಕಾರ್ಯಾರಂಭ ಮಾಡಲಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...