alex Certify
ಕನ್ನಡ ದುನಿಯಾ       Mobile App
       

Kannada Duniya

ಈಜಿಪ್ಟ್ ಸೇರಿದ್ದಾನಾ ಸಾಲಗಾರ ಉದ್ಯಮಿ ನೀರವ್ ಮೋದಿ.?

ವಿಜಯ್ ಮಲ್ಯನಂತೆ ದೇಶದ ಹಲವು ಬ್ಯಾಂಕ್ ಗಳಲ್ಲಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ದುಬೈ ಮೂಲಕ ಈಜಿಪ್ಟ್ ಗೆ ಹಾರಿರಬಹುದು. ಸದ್ಯ ಆತ ಈಜಿಪ್ಟ್ ನಲ್ಲೇ ಉಳಿದಿರುವ ಸಾಧ್ಯತೆಗಳಿವೆ ಅಂತ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಆದ್ರೆ ಈ ಮಾಹಿತಿ ನಿಖರವಾದುದಲ್ಲ ಅಂತಾನೂ ಹೇಳಲಾಗ್ತಿದೆ.

ಇತ್ತೀಚೆಗಷ್ಟೇ ನೀರವ್ ಮೋದಿ ದುಬೈನಲ್ಲಿ ಕಾಣಿಸಿಕೊಂಡಿದ್ದಾನೆ ಅಂತ ರಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆನಂತರದಲ್ಲಿ ಆತನ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವಲ್ಲಿ ಭಾರತದ ಗುಪ್ತಚರ ಇಲಾಖೆ ವಿಫಲವಾಗಿದೆ.

ರಾ ಅಧಿಕಾರಿಗಳ ಮಾಹಿತಿಯ ಪ್ರಕಾರ, ನೀರವ್ ಮೋದಿಗೆ ಜಾರಿ ನಿರ್ದೇಶನಾಲಯ, ಲುಕ್ ಔಟ್ ನೋಟೀಸ್ ನೀಡಿದ್ದು ದುಬೈ ಮತ್ತು ಲಂಡನ್ ಗೆ. ಆನಂತರದಲ್ಲಿ ಆತ ಹಲವು ದೇಶಗಳಲ್ಲಿ ಸಂಚರಿಸಿದ್ದಾನೆ. ನೀರವ್ ಮೋದಿಯ ಅಡಗುತಾಣ ಪತ್ತೆಯಾಗದ ಹಿನ್ನಲೆಯಲ್ಲಿ ಆತನ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿದ್ದು ವಿಮಾನ ನಿಲ್ದಾಣಗಳಲ್ಲಿ ಆತನ ಚಲನವಲನಗಳನ್ನ ನಿಯಂತ್ರಿಸುವಂತೆ ಇಂಟರ್ ಪೋಲ್ ಗೂ ಸೂಚನೆ ನೀಡಲಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 6500 ಕೋಟಿ ರೂಪಾಯಿಯನ್ನು ವಂಚಿಸಿದ ಆರೋಪ ನೀರವ್ ಮೋದಿ ಮೇಲಿದೆ. ತಲೆಮರೆಸಿಕೊಂಡಿರುವ ನೀರವ್ ಮೋದಿ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶಯನಾಲಯ ಕೂಡ ಪ್ರಕರಣ ದಾಖಲಿಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...