alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಬ್ ವೆಸ್ಟ್ ಕೈಕೊಟ್ರೂ ಆಕೆಗೆ ತಪ್ಪಲಿಲ್ಲ ಸಾವು..!

suicide-bomb

ನೈಜೀರಿಯಾದ ಕಸುವೇ ಶಾನು ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಿಸಲು ಬಂದಿದ್ದ ಮಹಿಳಾ ಆತ್ಮಹತ್ಯೆ ಬಾಂಬರ್ ಒಬ್ಬಳನ್ನು ಜನರೇ ಹತ್ಯೆ ಮಾಡಿದ್ದಾರೆ.

ಆ ಪ್ರದೇಶದಲ್ಲಿ ಎರಡು ಬಾಂಬ್ ಸ್ಫೋಟ ನಡೆಸಲು ಉಗ್ರರು ಪ್ಲಾನ್ ಮಾಡಿದ್ರು. ಮೊದಲನೆ ಮಹಿಳೆ ತನಗೆ ಅಳವಡಿಸಿದ್ದ ಬಾಂಬ್ ಅನ್ನು ಯಶಸ್ವಿಯಾಗಿ ಸ್ಫೋಟಿಸಿದ್ದಾಳೆ. ಆದ್ರೆ ಇನ್ನೊಬ್ಬ ಮಹಿಳೆಯ ಬಾಂಬ್ ವೆಸ್ಟ್ ಕೈಕೊಟ್ಟಿದ್ದರಿಂದ ಅದು ಸ್ಫೋಟಗೊಳ್ಳಲೇ ಇಲ್ಲ.

ಕೂಡಲೇ ಅವಳನ್ನು ಸುತ್ತುವರಿದ ಜನ ಥಳಿಸಿ ಹತ್ಯೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಆಕೆಗೆ ಅಳವಡಿಸಲಾಗಿದ್ದ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ರು. ಬೆಳಗ್ಗೆ 8.40 ರ ವೇಳೆಗೆ ಈ ಘಟನೆ ನಡೆದಿದ್ದು, ಯಾವುದೇ ಸಂಘಟನೆ ಅದರ ಹೊಣೆ ಹೊತ್ತುಕೊಂಡಿಲ್ಲ.

ಇಬ್ಬರು ಮಹಿಳೆಯರು ಬೋಕೋ ಹರಾಮ್ ಉಗ್ರ ಸಂಘಟನೆಗೆ ಸೇರಿದವರೆಂದು ಪೊಲೀಸರು ಶಂಕಿಸಿದ್ದಾರೆ. ಬೋಕೋ ಹರಾಮ್ ಉಗ್ರರ ಪ್ರಮುಖ ಅಡಗುತಾಣವಾದ ಸಂಬಿಸಾ ಕಾಡಿನಿಂದ ಎಲ್ಲರನ್ನೂ ಯಶಸ್ವಿಯಾಗಿ ತೆರವು ಮಾಡಿರೋದಾಗಿ ನೈಜೀರಿಯಾ ಅಧ್ಯಕ್ಷ ಮಹಮ್ಮದ್ ಬುಹಾರಿ ಹೇಳಿದ್ದರು. ಆದ್ರೆ ಇನ್ನೂ ಕೆಲವರು ಕಾಡಿನಲ್ಲಿ ಅಡಗಿದ್ದು, ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...