alex Certify
ಕನ್ನಡ ದುನಿಯಾ       Mobile App
       

Kannada Duniya

ಬೊಜ್ಜು- ಧೂಮಪಾನಿಗಳಿಗೆ ಕಟ್ಟುನಿಟ್ಟಾಯ್ತು ವೈದ್ಯಕೀಯ ನೀತಿ

fat1

ಇಂಗ್ಲೆಂಡ್ ರಾಷ್ಟ್ರೀಯ ಆರೋಗ್ಯ ಸಂಸ್ಥೆ ತನ್ನ ವೈದ್ಯಕೀಯ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಸ ನಿಯಮದ ಪ್ರಕಾರ ತೂಕ ಹೆಚ್ಚಿರುವ ವ್ಯಕ್ತಿಗಳು ಹಾಗೂ ಧೂಮಪಾನಿಗಳು ಚಿಕಿತ್ಸೆಗಾಗಿ ಬಹಳ ದಿನ ಕಾಯಬೇಕು.

ತೂಕ ಹೆಚ್ಚಿರುವ ಹಾಗೂ ಧೂಮಪಾನಿಗಳ ಹೆಸರನ್ನು ವೇಟಿಂಗ್ ಲಿಸ್ಟ್ ನ ಕೊನೆಯಲ್ಲಿಡಲು ನಿರ್ಧರಿಸಲಾಗಿದೆ. ಜೊತೆಗೆ ಶಸ್ತ್ರಚಿಕಿತ್ಸೆಗೊಳಗಾಗುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಬೊಜ್ಜಿರುವ ವ್ಯಕ್ತಿಗಳು ಶೇಕಡಾ 10ರಷ್ಟು ತೂಕ ಇಳಿಸಿಕೊಳ್ಳಬೇಕು. ಧೂಮಪಾನಿಗಳು ಕನಿಷ್ಠ ಎರಡು ತಿಂಗಳು ಧೂಮಪಾನ ಬಿಡಬೇಕು.ಇದಕ್ಕಾಗಿ ವಿಶೇಷ ತರಬೇತಿಯನ್ನು ಆಯೋಜಿಸಲಾಗುತ್ತದೆ. ಅವರ ಊಟ, ದಿನಚರಿ ಹೇಗಿರಬೇಕೆನ್ನುವ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಎನ್ ಎಚ್ ಎಸ್ ನ ಈ ನಿಯಮ ಅನೇಕರ ವಿರೋಧಕ್ಕೆ ಕಾರಣವಾಗಿದೆ. ಈ ನಿಯಮದಿಂದ ತೊಂದರೆಯಾಗಲಿದೆ. ಜೊತೆಗೆ ಬೇಧ-ಭಾವ ಮಾಡಲಾಗ್ತಾ ಇದೆ ಎಂದು ಅನೇಕರು ದೂರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...