alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡಬಾರದ್ದನ್ನು ಶಾಲೆಯಲ್ಲೇ ಮಕ್ಕಳಿಗೆ ತೋರಿಸಿದ ಶಿಕ್ಷಕ

isis 890

ನ್ಯೂಯಾರ್ಕ್: ಶಾಲೆಗಳಲ್ಲಿ ಮಕ್ಕಳಿಗೆ ಏನು ಕಲಿಸಬೇಕು, ಏನು ತೋರಿಸಬೇಕೆಂಬುದು ಗೊತ್ತಿಲ್ಲದ ಶಿಕ್ಷಕರು, ಕೆಲವೊಮ್ಮೆ ತಪ್ಪೆಸಗುವುದನ್ನು ನೋಡಿರುತ್ತೀರಿ. ಹೀಗೆ ಶಿಕ್ಷಕನೊಬ್ಬ ಶಾಲೆಯ ವಿದ್ಯಾರ್ಥಿಗಳಿಗೆ ನೋಡಬಾರದ್ದನ್ನು ತೋರಿಸಿ ಯಡವಟ್ಟು ಮಾಡಿಕೊಂಡಿದ್ದಾನೆ.

ನ್ಯೂಯಾರ್ಕ್ ಸೌತ್ ಬ್ರಾಕ್ಸ್ ಅಕಾಡೆಮಿ ಹೈಸ್ಕೂಲ್ ನಲ್ಲಿ ಶಿಕ್ಷಕನೊಬ್ಬ, ಮಕ್ಕಳಿಗೆ ಐಸಿಸ್ ಉಗ್ರರು ನಡೆಸುವ ಕ್ರೌರ್ಯದ ವಿಡಿಯೋ ತೋರಿಸಿದ್ದಾನೆ. ಈ ವಿಡಿಯೋದಲ್ಲಿನ ಕ್ರೌರ್ಯವನ್ನು ಕಂಡ ಮಕ್ಕಳು ಬೆಚ್ಚಿ ಬಿದ್ದಿದ್ದಾರೆ. ಇದರ ಪರಿಣಾಮ ಶಿಕ್ಷಕನ ವಿರುದ್ಧ ಕ್ರಮ ಕೈಗೊಂಡಿದ್ದು, 300 ಡಾಲರ್ ದಂಡ ವಿಧಿಸಲಾಗಿದೆ. ಐಸಿಸ್ ಉಗ್ರರು ಒತ್ತೆಯಾಳುಗಳ ಶಿರಚ್ಛೇದ ನಡೆಸುವ, ಕಡಿದ ತಲೆಗಳನ್ನು ಸಾಲಾಗಿ ಇಡುವ ಭಯಾನಕ ದೃಶ್ಯಗಳನ್ನು ಶಿಕ್ಷಕ ತೋರಿಸಿದ್ದ.

ಐಸಿಸ್ ಉಗ್ರರ ಭಯಾನಕ ಕ್ರೂರತೆಯನ್ನು ಕಂಡ ಮಕ್ಕಳು ಭಯಭೀತರಾಗಿದ್ದಾರೆ. ಹೀಗೆ ಶಾಲೆಯಲ್ಲಿ ಪಾಠ ಮಾಡುವ ಬದಲಿಗೆ, ಐಸಿಸ್ ಕ್ರೂರತೆಯ ವಿಡಿಯೋವನ್ನು ತೋರಿಸಿದ ಶಿಕ್ಷಕನಿಗೆ ಈಗ 300 ಡಾಲರ್ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...