alex Certify
ಕನ್ನಡ ದುನಿಯಾ       Mobile App
       

Kannada Duniya

25 ಕೋಟಿಗೆ ಹರಾಜಾಯ್ತು ಮಹಾನ್ ವಿಜ್ಞಾನಿಯ ಈ ಪುಸ್ತಕ

newton-book

ವಿಶ್ವಕಂಡ ಅದ್ವಿತೀಯ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ಅವರ ಚಲನೆಯ ಮೂರು ನಿಯಮಗಳುಳ್ಳ ಮೂಲ ಕೃತಿ ಬರೋಬ್ಬರಿ 3.7 ಮಿಲಿಯನ್ ಡಾಲರ್ ಅಂದ್ರೆ ಅಂದಾಜು 25 ಕೋಟಿ ರೂಪಾಯಿಗೆ ಹರಾಜಾಗಿದೆ.

ಈ ಮೂಲಕ ಅತಿ ಹೆಚ್ಚಿನ ಬೆಲೆಗೆ ಹರಾಜಾದ ಏಕೈಕ ವಿಜ್ಞಾನ ಪುಸ್ತಕ ಎನಿಸಿಕೊಂಡಿದೆ. ‘ದಿ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ’ ಎಂಬ ಪುಸ್ತಕವನ್ನು ನ್ಯೂಟನ್ 1687ರಲ್ಲಿ ಬರೆದಿದ್ದರು.

ಆಡಿನ ಚರ್ಮದಿಂದ ಈ ಪುಸ್ತಕಕ್ಕೆ ಹೊದಿಕೆ ಮಾಡಿರುವುದು ವಿಶೇಷ. 1-1.5 ಮಿಲಿಯನ್ ಡಾಲರ್ ಗೆ ಇದು ಮಾರಾಟವಾಗಬಹುದೆಂಬ ನಿರೀಕ್ಷೆ ಇತ್ತು. ಆದ್ರೆ ಅದರ ನಾಲ್ಕು ಪಟ್ಟು ಬೆಲೆಗೆ ಬಿಡ್ಡರ್ ಒಬ್ಬರು ಪುಸ್ತಕವನ್ನು ಹರಾಜಿನಲ್ಲಿ ಕೊಂಡುಕೊಂಡಿದ್ದಾರೆ.

ಈ ಪುಸ್ತಕದಲ್ಲಿ ನ್ಯೂಟನ್ ಚಲನೆಯ ಮೂರು ನಿಯಮಗಳನ್ನು ವಿವರಿಸಿದ್ದಾರೆ, ವಿದ್ಯಾರ್ಥಿಗಳ ಭೌತಶಾಸ್ತ್ರ ಪಠ್ಯದಲ್ಲಿ ಈಗಲೂ ಅವುಗಳನ್ನು ಅಳವಡಿಸಲಾಗಿದೆ. ನ್ಯೂಟನ್ ರ ಈ ಪುಸ್ತಕ 9×7 ನಷ್ಟು ಗಾತ್ರವಿದ್ದು, 252 ಪುಟಗಳನ್ನು ಹೊಂದಿದೆ. ಇದನ್ನು ಕಿಂಗ್ ಜೇಮ್ಸ್ -2 ಅವರಿಗೆ ಉಡುಗೊರೆಯಾಗಿ ನೀಡಲಾಗಿತ್ತು. ಬಳಿಕ 2013 ರಲ್ಲಿ 2.5 ಮಿಲಿಯನ್ ಡಾಲರ್ ಕೊಟ್ಟು ನ್ಯೂಯಾರ್ಕ್ ಗೆ ತರಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...