alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯ ಕ್ಷಣದಲ್ಲೇ ತಲೆ ಮೇಲಿತ್ತು ಆಪತ್ತು…!

ಮದುವೆಯ ನೆನಪು ಯಾವತ್ತಿಗೂ ಸಿಹಿಯಾಗಿರಬೇಕು ಅಂತಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರು, ಈ ನ್ಯೂ ಕಪಲ್ಸ್ ಗಳ ಮದುವೆಯ ಸಂಭ್ರಮ ಜೀವಮಾನ ಪೂರ್ತಿ ಕಹಿ ನೆನಪಾಗಿ ಉಳಿದುಬಿಡ್ತಿತ್ತು. ಮದುವೆಯ ಸಂದರ್ಭದಲ್ಲಿ ನವ ವಧುವರರು ತಲೆಯ ಮೇಲಿದ್ದ ಗಂಡಾಂತರದಿಂದ ಪಾರಾದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚೆಯಾನೆ ಮತ್ತು ಲುಕಾಸ್ ಕೊಪೆಸ್ಕ್ವಾ ಆಗತಾನೇ ಮದುವೆಯ ಫೋಟೋ ಶೂಟ್ ಮುಗಿಸಿ ಬಂದು ಮರಳ ನೆರಳಿನಲ್ಲಿ ಕೂತು ಮಾತನಾಡುತ್ತಿದ್ದರು. ಈ ವೇಳೆ ಅವರಿಗೆ ಮೇಲಿಂದ ಏನೋ ಸದ್ದಾಗುತ್ತಿರೋದು ಕೇಳಿಸಿದೆ. ಕೂಡಲೇ ತಲೆ ಎತ್ತಿ ನೋಡಿದ್ರೆ ಭಾರೀ ಗಾತ್ರದ ರೆಂಬೆಯೊಂದು ಮುರಿದು ಬೀಳುತ್ತಿರೋದು ಕಾಣಿಸಿತು.

ಈ ದಂಪತಿ ಕೂಡಲೇ ಆ ಸ್ಥಳದಿಂದ ಓಡೋದಕ್ಕೂ ಕೊಂಬೆ ಮುರಿದು ಬೀಳೋದಕ್ಕೂ ಜಸ್ಟ್ ಒಂದೇ ಕ್ಷಣದ ವ್ಯತ್ಯಾಸ ಅಷ್ಟೆ. ಘಟನೆಯಲ್ಲಿ ಯಾರಿಗೂ ಪೆಟ್ಟಾಗಿಲ್ಲ. ಜೀವನ ಪೂರ್ತಿ ಒಬ್ಬರನ್ನೊಬ್ಬರು ಕಾಪಾಡ್ತಿವಿ ಅಂತ ಕೈ ಹಿಡಿದ ದಂಪತಿ ಮದುವೆಯ ಸಂದರ್ಭದಲ್ಲೇ ಆ ಮಾತನ್ನು ನಿಜವಾಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...