alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ಕ್ಯಾಮರಾದಲ್ಲಿ ಸೆರೆಯಾಗಿದೆ ಪತ್ನಿ ಮೇಲಿನ ಶಾರ್ಕ್ ದಾಳಿ

ಸೌತ್ ಕೆರೊಲಿನಾದ ಸಾರಾ ಇಲಿಗ್ ಹಾಗೂ ಇವಾನ್ ಕ್ಯಾರೊಲ್ ದಂಪತಿ ಹನಿಮೂನ್ ಗೆ ತೆರಳಿದ್ರು. ಕೆರಿಬಿಯನ್ ಸಮುದ್ರದಲ್ಲಿ ಈಜಾಡುತ್ತ ಫುಲ್ ರಿಲ್ಯಾಕ್ಸ್ ಆಗುತ್ತಿದ್ರು. ಸಾರಾ ನಿಧಾನವಾಗಿ ಮೀನುಗಳ ಮಧ್ಯೆ ಈಜಾಡುತ್ತ, ನೀರಿನೊಳಗಿನ ಅಂದವನ್ನು ಕಣ್ತುಂಬಿಕೊಳ್ತಾ ಇದ್ಲು.

ಆಗ ಇದ್ದಕ್ಕಿದ್ದಂತೆ ಕೈಗೆ ಏನೋ ತಾಗಿದಂತಾಗಿದೆ. ಪತಿ ಇವಾನ್ ತುಂಟಾಟ ಮಾಡ್ತಿದ್ದಾನೆ ಎಂದುಕೊಂಡಿದ್ದ ಸಾರಾಗೆ, ಇದ್ದಕ್ಕಿದ್ದಂತೆ ಜೀವ ಹೋದಷ್ಟು ನೋವಾಗಿತ್ತು. ಆಗ ಅತ್ತ ನೋಡಿದ ಸಾರಾ ಬೆಚ್ಚಿಬಿದ್ದಿದ್ಲು. ದೊಡ್ಡ ಶಾರ್ಕ್ ಮೀನೊಂದು ಅವಳ ಕೈಗಳನ್ನು ಕಚ್ಚಿತ್ತು.

ಅರೆಕ್ಷಣ ತಡವಾಗಿದ್ರೂ ಸಾರಾ ಶಾರ್ಕ್ ಗೆ ಬಲಿಯಾಗುತ್ತಿದ್ಲು. ಕೂಡಲೇ ಎಚ್ಚೆತ್ತುಕೊಂಡ ಆಕೆ ಸರಸರನೆ ಈಜಿಕೊಂಡು ಪಕ್ಕಕ್ಕೆ ಬಂದಿದ್ದಾಳೆ. ಕಣ್ಣಿಗೆ ಹಾಕಿದ್ದ ಗ್ಲಾಸ್ ಬದಿಗೆ ಸರಿದಿದ್ದರಿಂದ ಶಾರ್ಕ್ ಬಂದಿದ್ದು ಸಾರಾಗೆ ಕಾಣಿಸಿರಲಿಲ್ಲ. ಪತ್ನಿ ಮೇಲೆ ಶಾರ್ಕ್ ದಾಳಿ ಮಾಡಿದ ದೃಶ್ಯವನ್ನು ಇವಾನ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...