alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ನಂತ್ರ 3 ದಿನ ಶೌಚಾಲಯಕ್ಕೆ ಹೋಗೋದಿಲ್ಲ ವಧು-ವರ…!

ಮದುವೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಅನೇಕ ಸಂಪ್ರದಾಯಗಳು ಜಾರಿಯಲ್ಲಿವೆ. ಒಂದೊಂದು ಕಡೆ ಒಂದೊಂದು ಪದ್ಧತಿ ಅನುಸರಿಸಲಾಗುತ್ತದೆ. ಇಂಡೋನೇಷ್ಯಾದ ಟಿಡೊಂಗ್ ಸಮುದಾಯದ ಪದ್ಧತಿಯೊಂದು ಆಶ್ಚರ್ಯ ಹುಟ್ಟಿಸುವಂತಿದೆ. ಮದುವೆಯಾದ ಮೂರು ದಿನ ವಧು-ವರರು ಶೌಚಾಲಯಕ್ಕೆ ಹೋಗುವಂತಿಲ್ಲ.

ಆಶ್ಚರ್ಯವಾದ್ರೂ ಇದು ಸತ್ಯ. ಮದುವೆಯಾದ ಮೂರು ದಿನದೊಳಗೆ ಶೌಚಾಲಯಕ್ಕೆ ಹೋದ್ರೆ ಅದನ್ನು ಅಲ್ಲಿನ ಜನರು ಅಪಶಕುನವೆಂದು ಭಾವಿಸ್ತಾರೆ. ಮದುವೆಯೊಂದು ಪವಿತ್ರ ಪದ್ಧತಿಯಾಗಿದೆ. ಶೌಚಾಲಯಕ್ಕೆ ಹೋದ್ರೆ ಪವಿತ್ರತೆಗೆ ಧಕ್ಕೆ ಬರುತ್ತದೆ ಎಂದವರು ನಂಬಿದ್ದಾರೆ.

ದುಷ್ಟ ಶಕ್ತಿಗಳಿಂದ ವಧು-ವರರನ್ನು ರಕ್ಷಿಸಲು ಕೂಡ ಶೌಚಾಲಯಕ್ಕೆ ಹೋಗದಂತೆ ಹೇಳಲಾಗುತ್ತದೆ. ಶೌಚಾಲಯನ್ನು ಅನೇಕರು ಬಳಸ್ತಾರೆ. ಅವ್ರಲ್ಲಿರುವ ನಕಾರಾತ್ಮಕ ಶಕ್ತಿ ಶೌಚಾಲಯದ ಮೂಲಕ ಹೊರ ಹೋಗುತ್ತದೆ. ಮದುವೆಯಾದ ತಕ್ಷಣ ಶೌಚಾಲಯಕ್ಕೆ ಹೋದ್ರೆ ನಕಾರಾತ್ಮಕ ಶಕ್ತಿ ವಧು-ವರರನ್ನು ಪ್ರವೇಶ ಮಾಡುತ್ತದೆ. ಇದು ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ ಎಂದು ನಂಬಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...