alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಅಪಘಾತದಲ್ಲಿ ಗರ್ಭಿಣಿ ಸಾವು: ರಸ್ತೆ ಬದಿಯಲ್ಲಿ ಕೇಳ್ತು ಮಗುವಿನ ಅಳು

ಬ್ರೆಜಿಲ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಗರ್ಭಿಣಿ ಸಾವನ್ನಪ್ಪಿದ್ದಾಳೆ. ಆದ್ರೆ ತಾಯಿ ಹೊಟ್ಟೆಯಲ್ಲಿದ್ದ ಮಗು ರಸ್ತೆ ಬದಿಯಲ್ಲಿ ಜೀವಂತವಾಗಿ ಬಿದ್ದಿತ್ತು.

ಮಾಧ್ಯಮಗಳ ವರದಿ ಪ್ರಕಾರ, ಸಾವಪೊಲೊ ಮತ್ತು ಕ್ಯೂರಿಟಿಯಾ ಮಧ್ಯೆ ರಸ್ತೆ ಅಪಘಾತ ಸಂಭವಿಸಿದೆ. ಮರದ ತುಂಡುಗಳನ್ನು ಸಾಗಿಸುತ್ತಿದ್ದ ಟ್ರಕ್ ಶನಿವಾರ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗರ್ಭಿಣಿ ಟ್ರಕ್ ನಲ್ಲಿದ್ದಳು ಎನ್ನಲಾಗಿದೆ. ಘಟನೆಯಲ್ಲಿ ಟ್ರಕ್ ಚಾಲಕನಿಗೆ ಗಾಯವಾಗಿದೆ. 39 ವಾರಗಳ ಗರ್ಭಿಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಮರದ ತುಂಡುಗಳ ಅಡಿ ಮಹಿಳೆ ಶವ ಸಿಕ್ಕಿದೆ. ಹೊಟ್ಟೆಯಲ್ಲಿ ಮಗು ಇರಲಿಲ್ಲ. ಸ್ವಲ್ಪ ದೂರ ಮಗುವಿನ ಅಳು ಕೇಳ್ತಿತ್ತು. ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೃತಳ ಕುಟುಂಬಸ್ಥರ ಪತ್ತೆ ಕಾರ್ಯ ಶುರುವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...