alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಗರ್ಭಪಾತವಾದ್ರೆ ಪತಿಗೆ ಸಿಗುತ್ತೆ ರಜಾ…!

ಗರ್ಭಪಾತದ ಸಂದರ್ಭದಲ್ಲಿ ಪತ್ನಿಗೆ ನೆರವಾಗಲು ಪತಿಗೂ ರಜೆ ನೀಡುವ ಬಗ್ಗೆ ನ್ಯೂಜಿಲ್ಯಾಂಡ್ ಸರ್ಕಾರ ಚಿಂತನೆ ನಡೆಸುತ್ತಿದೆ. ಗರ್ಭಿಣಿ ಪತ್ನಿಗೆ ಯಾವುದೇ ಸಂದರ್ಭದಲ್ಲಿ ಗರ್ಭಪಾತವಾದ್ರೆ ಇದನ್ನು ಕುಟುಂಬಸ್ಥರ ಸಾವೆಂದು ಪರಿಗಣಿಸಿ ರಜೆ ನೀಡಲು ಸರ್ಕಾರ ಚರ್ಚೆ ನಡೆಸುತ್ತಿದೆ.

ನ್ಯೂಜಿಲ್ಯಾಂಡ್ ಸಂಸತ್ ನಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಗರ್ಭಪಾತವಾದ್ರೆ ಪತಿಗೆ ಮೂರು ದಿನಗಳ ರಜೆ ಸಿಗಲಿದೆ. ಲೇಬರ್ ಪಕ್ಷದ ಸಂಸದ ಗಿನ್ನಿ ಆಂಡರ್ಸನ್ ಸಂಸತ್ ನಲ್ಲಿ ಮಸೂದೆ ಮಂಡಿಸಿದ್ರು. ದೇಶದಲ್ಲಿ ಕುಟುಂಬಸ್ಥರ ಮರಣ  ಹಾಗೂ ಪತ್ನಿ ಹೆರಿಗೆಯಾದ್ರೆ ರಜೆ ಸಿಗ್ತಿದೆ. ಈಗ ಗರ್ಭಪಾತವಾದ್ರೂ ರಜೆ ನೀಡಲು ನಿರ್ಧರಿಸಲಾಗ್ತಿದೆ.

ಈ ಮಸೂದೆ ಮಂಜೂರಿಗೆ ಈವರೆಗೆ 3700 ಮಂದಿ ಸಹಿ ಹಾಕಿದ್ದಾರೆ. ಗರ್ಭಪಾತದ ಸಂದರ್ಭದಲ್ಲಿ ಪತಿ-ಪತ್ನಿ ಇಬ್ಬರೂ ದುಃಖದಲ್ಲಿರುವ ಕಾರಣ ರಜೆ ನೀಡುವ ಅಗತ್ಯವಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...