alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಗತಿಕ ಮಟ್ಟದ ಸಭೆಗೆ ಮಗುವಿನೊಂದಿಗೆ ಬಂದು ಇತಿಹಾಸ ಬರೆದ ಪ್ರಧಾನಿ

ಮದುವೆಯಾಗಿ, ಮಕ್ಕಳಾದ್ಮೇಲೆ ಮಹಿಳೆಯರ ವೈಯಕ್ತಿಕ ಬದುಕು ಮುಗೀತು ಎನ್ನುವ ಕಾಲವೊಂದಿತ್ತು. ಆದ್ರೀಗ ಜಗತ್ತು ಬದಲಾಗಿದೆ. ಮಹಿಳೆಯರು ಬದಲಾಗಿದ್ದಾರೆ. ಮದುವೆ, ಮಕ್ಕಳ ಜೊತೆ ವೃತ್ತಿಯಲ್ಲಿ ಉನ್ನತಿ ಕಾಣ್ತಿದ್ದಾರೆ. ಇದಕ್ಕೆ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಉತ್ತಮ ನಿದರ್ಶನ. ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿ ಇತಿಹಾಸ ಬರೆದಿದ್ದ ಜಸಿಂದಾ ಈಗ ಮತ್ತೊಂದು ಇತಿಹಾಸ ಬರೆದಿದ್ದಾರೆ.

ಜಸಿಂದಾ ಮೂರು ತಿಂಗಳ ಮಗುವಿನೊಂದಿಗೆ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಹಾಲ್ ಗೆ ಬಂದಿದ್ದಾರೆ. ಅಲ್ಲಿ ಮಗುವನ್ನು ಪ್ರೀತಿ ಮಾಡ್ತಾ, ಆಡಿಸುತ್ತಿದ್ದರು. ಈ ವೇಳೆ ಅವ್ರ ಸಂಗಾತಿ ಕೂಡ ಹಾಲ್ ನಲ್ಲಿ ಉಪಸ್ಥಿತರಿದ್ದರು. ಜಸಿಂದಾ ಹಾಗೂ ಮಗಳು ನೀವ್ ನೆಲ್ಸನ್ ಮಂಡೇಲಾ ಶಾಂತಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಜಸಿಂದಾ, ನ್ಯೂಜಿಲ್ಯಾಂಡ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ಹುದ್ದೆಯಲ್ಲಿರುವಾಗಲೇ ಅವ್ರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಸಭೆಗೆ ಮಗುವನ್ನು ಕರೆದುಕೊಂಡು ಬರುವ ಮೂಲಕ ಮಾತೃತ್ವ ಮತ್ತು ಮಹಿಳೆಯರ ವೃತ್ತಿ ಬದುಕಿನ ಬಗ್ಗೆ ಜನರ ಗಮನ ಸೆಳೆದಿದ್ದಾರೆ. ಮಗಳನ್ನು ಅಮೆರಿಕಾಕ್ಕೆ ಕರೆತರಲು ಸರ್ಕಾರಿ ಬೊಕ್ಕಸದ ಹಣ ಖರ್ಚು ಮಾಡಿಲ್ಲ. ನಮ್ಮ ವೈಯಕ್ತಿಕ ಖರ್ಚು ಎಂದು ಜಸಿಂದಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...