alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗೆ ಜನ್ಮ ನೀಡಲು ಸೈಕಲ್ ಏರಿ ಆಸ್ಪತ್ರೆಗೆ ಬಂದ ಗರ್ಭಿಣಿ…!

ಇದೇ ವರ್ಷ ಜೂನ್ ನಲ್ಲಿ ನ್ಯೂಜಿಲೆಂಡ್ ನ ಪ್ರಧಾನ ಮಂತ್ರಿ ಜೆಸಿಂದಾ ಅಡೆರೇನ್ ಆಕ್ಲೆಂಡ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಧಾನಿ ಹುದ್ದೆಯಲ್ಲಿರುವಾಗ ಮಗುವಿಗೆ ಜನ್ಮ ನೀಡಿದ ವಿಶ್ವದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಜೆಸಿಂದಾ ಪಾತ್ರರಾಗಿದ್ದಾರೆ. ಈಗ ಜಸಿಂದಾ ಮಂತ್ರಿ ಮಂಡಲದಲ್ಲಿರುವ ಇನ್ನೊಬ್ಬ ಮಹಿಳಾ ಸಚಿವೆ ಸುದ್ದಿಗೆ ಬಂದಿದ್ದಾರೆ.

ಜೆಸಿಂದಾ ಸಹೋದ್ಯೋಗಿ ಜೂಲಿ ಎನೆ ಜೆಂಟರ್ ತಾಯಿಯಾಗ್ತಿದ್ದಾರೆ. ಅವ್ರ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲ ಮಗುವಿನ ಹೆರಿಗೆಗೆ ಜೂಲಿ ಸೈಕಲ್ ಏರಿ ಆಸ್ಪತ್ರೆಗೆ ಬಂದಿದ್ದಾರೆ. 38 ವರ್ಷದ ಜೂಲಿ ನ್ಯೂಜಿಲೆಂಡ್ ನ ಮಹಿಳಾ, ಆರೋಗ್ಯ ಮತ್ತು ಸಾರಿಗೆ ಸಚಿವೆಯಾಗಿದ್ದಾರೆ.

ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಆಕ್ಲೆಂಡ್ ಆಸ್ಪತ್ರೆಗೆ ಸೈಕಲ್ ಮೂಲಕ ಬಂದಿದ್ದಾರೆ ಜೂಲಿ. ಈ ಫೋಟೋವನ್ನು ಸಚಿವೆ ತಮ್ಮ ಇನ್ಸ್ಟ್ರಾಗ್ರಾಮ್ ಅಕೌಂಟ್ ಗೆ ಹಾಕಿದ್ದಾರೆ. ಭಾನುವಾರ ಫೋಟೋ ಹಾಕಿದ ಜೂಲಿ, ಹೆರಿಗೆಗಾಗಿ ಸೈಕಲ್ ಸವಾರಿ. ಸುಂದರ ಭಾನುವಾರ ಮನಸ್ಸಿಗೆ ಮುದ ನೀಡ್ತು. ಕಾರಿನಲ್ಲಿ ಕೆಲಸಗಾರರು, ಸಲಹೆಗಾರರಿಗೆ ಜಾಗವಿರಲಿಲ್ಲ. ಹಾಗಾಗಿ ನಾನು ನನ್ನ ಪತಿ ಸೈಕಲ್ ಏರಿದ್ವಿ. ನನ್ನ ಮೂಡ್ ಕೂಡ ಸೈಕಲ್ ಸವಾರಿಯಿಂದ ಉಲ್ಲಾಸಿತಗೊಂಡಿದೆ ಎಂದು ಬರೆದಿದ್ದಾರೆ. 42 ವಾರಗಳ ಗರ್ಭಿಣಿ ಜೂಲಿ ಆಸ್ಪತ್ರೆಗೆ ದಾಖಲಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...