alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸಂದರ್ಶನಕ್ಕೆ ಬಂದ್ರೆ ನಿಮಗೆ ಸಿಗುತ್ತೆ ನ್ಯೂಜಿಲೆಂಡ್ ಟ್ರಿಪ್

nz_1488450356

ಸುಂದರ ರಾಷ್ಟ್ರ ನ್ಯೂಜಿಲೆಂಡ್ ನೋಡಬೇಕು ಅನ್ನೋ ಆಸೆ ನಿಮಗಿದ್ಯಾ? ಹಾಗಿದ್ರೆ ಕಿವೀಸ್ ನಾಡಿಗೆ ಪ್ರವಾಸ ಮಾಡುವ ಚಾನ್ಸ್ ಇಲ್ಲಿದೆ. ಇದಕ್ಕೆ ನೀವು ವೆಲ್ಲಿಂಗ್ಟನ್ ನಗರದ ಟೆಕ್ ಇಂಡಸ್ಟ್ರಿ ನಡೆಸೋ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಅಲ್ಲಿ ನೀವು ಆಯ್ಕೆಯಾಗಿದ್ದೇ ಆದಲ್ಲಿ ನ್ಯೂಜಿಲೆಂಡ್ ಗೆ ಉಚಿತ ಪ್ರವಾಸ ಮಾಡುವ ಅವಕಾಶ ನಿಮ್ಮದಾಗಲಿದೆ.

‘ಲುಕ್ಸೀ ವೆಲ್ಲಿಂಗ್ಟನ್’ ಅನ್ನೋದು ಈ ಕಾರ್ಯಕ್ರಮದ ಹೆಸರು. ‘ವೆಲ್ಲಿಂಗ್ಟನ್ ರೀಜನಲ್ ಎಕನಾಮಿಕ್ ಡೆವಲಪ್ಮೆಂಟ್ ಏಜೆನ್ಸಿ’ ಹಾಗೂ ‘ವರ್ಕ್ ಹಿಯರ್ ನ್ಯೂಜಿಲೆಂಡ್’, ಪಾಲುದಾರಿಕೆ ಮೇಲೆ ಇದನ್ನು ಆಯೋಜಿಸಿವೆ. 100 ಅಭ್ಯರ್ಥಿಗಳನ್ನು ಇಲ್ಲಿ ಆಯ್ಕೆ ಮಾಡಲಾಗುತ್ತದೆ.

ಆಯ್ಕೆಯಾದವರ ವಿಮಾನ ವೆಚ್ಚ ಭರಿಸಲಿದ್ದಾರೆ, ಜೊತೆಗೆ ಉಳಿದುಕೊಳ್ಳುವ ವ್ಯವಸ್ಥೆ ಎಲ್ಲವನ್ನೂ ಇವರೇ ಮಾಡಲಿದ್ದಾರೆ. ವೆಲ್ಲಿಂಗ್ಟನ್ ನ ಪ್ರಮುಖ ಕಂಪನಿಗಳ ಉದ್ಯೋಗಕ್ಕಾಗಿ ನಡೆಯುವ ಸಂದರ್ಶನದಲ್ಲಿ ನೀವು ಪಾಲ್ಗೊಳ್ಳಬೇಕಷ್ಟೆ. ವಾರಾಂತ್ಯದಲ್ಲಿ ನೀವು ಆಯ್ಕೆಯಾಗಿದ್ದೀರೋ ಇಲ್ಲವೋ ಎಂಬುದರ ಬಗ್ಗೆ ಸೂಚನೆ ಕೂಡ ಸಿಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 20. ಮೇ 8-11ರವರೆಗೆ ನ್ಯೂಜಿಲೆಂಡ್ ನಲ್ಲಿ ಸಂದರ್ಶನ ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...