alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕುಗಳ ಹೆಸರಿಗೆ 2 ಕೋಟಿ ಆಸ್ತಿ ಬರೆದಿದ್ದಾಳೆ ಮಹಿಳೆ

ನ್ಯೂಯಾರ್ಕ್ ನ ಶ್ರೀಮಂತ ಮಹಿಳೆಯೊಬ್ಳು ತನ್ನ ಆಸ್ತಿಯಲ್ಲಿ ಒಂದು ಭಾಗವನ್ನು ಬೆಕ್ಕುಗಳ ಹೆಸರಿಗೆ ಬರೆದಿದ್ದಾಳೆ. ಎಲ್ಲೆನ್ ಫ್ರೇ ವೂಟರ್ ಎಂಬ ಮಹಿಳೆ 3 ಮಿಲಿಯನ್ ಡಾಲರ್ ಬೆಲೆಬಾಳುವ ಎಸ್ಟೇಟ್ ಹೊಂದಿದ್ದಾಳೆ. ಅದರಲ್ಲಿ 300,000 ಡಾಲರ್ ಬೆಲೆಬಾಳುವ ಆಸ್ತಿಯನ್ನು ತನ್ನ ಮುದ್ದಿನ ಬೆಕ್ಕುಗಳಾದ ಟೈಗರ್ ಹಾಗೂ ಟ್ರಾಯ್ ಹೆಸರಿಗೆ ಬರೆದಿಟ್ಟಿದ್ದಾಳೆ.

ವಿಧವೆಯಾಗಿದ್ದ ಎಲ್ಲೆನ್ ಇತ್ತೀಚೆಗಷ್ಟೆ ಮೃತಪಟ್ಟಿದ್ದಾಳೆ. ತಾನು ಸತ್ತ ಬಳಿಕ ಬೆಕ್ಕುಗಳು ಅನಾಥವಾಗಬಾರದು, ಅವುಗಳನ್ನು ಪಂಜರದಲ್ಲಿ ಕೂಡಿಡಬಾರದು ಅಂತಾ ವಿಲ್ ನಲ್ಲಿ ಸ್ಪಷ್ಟವಾಗಿ ಬರೆದಿಟ್ಟಿದ್ದಾಳೆ. ಎಲ್ಲೆನ್ ಮನೆಯಲ್ಲಿ ಆರೋಗ್ಯ ಸಹಾಯಕಿಯಾಗಿದ್ದ ಮಹಿಳೆ ಈಗ ಬೆಕ್ಕುಗಳ ಆರೈಕೆ ಮಾಡುತ್ತಿದ್ದಾಳೆ.

ಬೆಕ್ಕುಗಳನ್ನು ಎಲ್ಲೆನ್ ಮಕ್ಕಳಿಗಿಂತ್ಲೂ ಹೆಚ್ಚು ಪ್ರೀತಿಸುತ್ತಿದ್ಲು ಅಂತಾ ತಿಳಿಸಿದ್ದಾಳೆ. ಉಳಿದ ಆಸ್ತಿಯನ್ನು ಆರೋಗ್ಯ ಸಹಾಯಕಿ ಹಾಗೂ ವಕೀಲನ ಹೆಸರಿಗೆ ಬರೆದಿದ್ದಾಳೆ. ಅಕಸ್ಮಾತ್ ಬೆಕ್ಕುಗಳು ಮೃತಪಟ್ಟಲ್ಲಿ ಅವುಗಳ ಹೆಸರಲ್ಲಿದ್ದ ಆಸ್ತಿ ನೆದರ್ಲೆಂಡ್ ನಲ್ಲಿರೋ ಎಲ್ಲೆನ್ ಸಹೋದರಿಗೆ ಸೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...