alex Certify
ಕನ್ನಡ ದುನಿಯಾ       Mobile App
       

Kannada Duniya

ಅಶರೀರವಾಣಿಯ ಮಾತು ಕೇಳಿ ಯುವತಿಯ ಹತ್ಯೆ…!

ಅಶರೀರವಾಣಿಯ ಮಾತು ಕೇಳಿ ಯುವತಿಯನ್ನು ಕೊಲೆ ಮಾಡಿರುವುದಾಗಿ ವ್ಯಕ್ತಿಯೊಬ್ಬ ಹೇಳಿರುವ ವಿಚಿತ್ರ ಘಟನೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದಿದೆ. ಈ ಸಂಬಂಧ ಡೇನ್ಯುವಲ್‌ ಡ್ರೇಟನ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಡೇನ್ಯುವಲ್‌, ಅಶರೀರವಾಣಿ ಹೇಳಿದ್ದಕ್ಕೆ, ಆಕೆಯನ್ನು ಕೊಲೆ ಮಾಡಬೇಕಾಗಿ ಬಂತು. ಈ ಅಶರೀರವಾಣಿ ಮನುಷ್ಯರ ವೇದನೆ ಕೇಳ ಬಯಸುತ್ತಿದೆ ಎಂದು ವರದಿಗಾರನಲ್ಲಿ ಹೇಳಿಕೊಂಡಿದ್ದಾನೆ. ನ್ಯೂಯಾರ್ಕ್‌ ನಗರದಲ್ಲಿ ಡೇಟಿಂಗ್‌ ಅಪ್ಲಿಕೇಶನ್‌ ಮೂಲಕ ಪರಿಚಿತಳಾದ ಯುವತಿಯನ್ನು ಕೊಲೆ ಮಾಡಿರುವ ಡೇನ್ಯುವಲ್‌ನನ್ನು ಪೊಲೀಸರು ಲಾಸ್‌ ಏಂಜಲೀಸ್‌ ಜೈಲಿನಲ್ಲಿಟ್ಟಿದ್ದಾರೆ.

ನನಗೆ ಅವಳು ತುಂಬಾ ಇಷ್ಟವಾಗಿದ್ದಳು. ನಾನು ಅವಳನ್ನು ಕೊಲೆ ಮಾಡಲು ಇಚ್ಛೆ ಪಟ್ಟಿರಲಿಲ್ಲ. ಆದರೆ ಆ ಅಶರೀರವಾಣಿ ಅವಳು ಸಾಯಲೇ ಬೇಕು ಎಂದು ಹೇಳಿತ್ತು ಎಂದು ಡೇನ್ಯುವಲ್‌ ಪತ್ರಿಕೆ ನಡೆಸಿದ ಸಂದರ್ಶನದ ವೇಳೆ ಹೇಳಿದ್ದಾನೆ.

ನನ್ನ ಯೋಚನೆ, ಕೆಲಸಗಳನ್ನು ಅವರು ನಿಯಂತ್ರಿಸುತ್ತಾರೆ. ನನ್ನ ಶಕ್ತಿ ಹಾಗೂ ಯೋಚನೆಗಳನ್ನು ಅವರು ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ನನಗೆ ಅವಳನ್ನು ಕೊಲ್ಲುವ ಯಾವುದೇ ಉದ್ಧೇಶ ಇರಲಿಲ್ಲ. ಆದರೆ ಅವರು ಹೇಳಿದ್ದಕ್ಕೆ ನಾನು ಕೊಲೆ ಮಾಡಬೇಕಾಗಿ ಬಂತು ಎಂದು ಸಂದರ್ಶನದಲ್ಲಿ ಹೇಳಿದ್ದಾನೆ.
ಡೇನ್ಯುಯಲ್‌ ಇದೇ ರೀತಿ ಕನಿಷ್ಠ ಐದು ಹುಡುಗಿಯರನ್ನು ಕೊಲೆ ಮಾಡಿರುವ ಕುರಿತು ಅನುಮಾನಗಳಿದ್ದು, ಇನ್ನೂ ಪುರಾವೆಗಳು ಸಿಕ್ಕಿಲ್ಲ. ಹೀಗಾಗಿ ಈ ಆರೋಪಗಳ ಬಗ್ಗೆ ಪೊಲೀಸರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಇದಲ್ಲದೆ ಕೊಲೆ ಮಾಡಿದ ಬಳಿಕ, ಅವಳು ಬಳಕೆ ಮಾಡುತ್ತಿದ್ದ ಕೆಲ ವಸ್ತುಗಳನ್ನು ನಾನು ಬಳಕೆ ಮಾಡಿದೆ. ಇದರಿಂದ ಪೊಲೀಸರು ನನ್ನನ್ನು ಹಿಡಿಯುತ್ತಾರೆ ಎಂದು ಗೊತ್ತಿತ್ತು. ಅದೇ ನನಗೂ ಬೇಕಿತ್ತು ಎಂದು ಡೇನ್ಯುವಲ್‌ ಹೇಳಿಕೆ ನೀಡಿದ್ದಾನೆ. ಪೊಲೀಸರು ಹಿಡಿಯುವ ವೇಳೆ ಡೇನ್ಯುವಲ್‌ ಒಂದು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಾನೆ ಎನ್ನಲಾಗಿದೆ.

ನಾನು ಮಾಡಿದ ಕೃತ್ಯಗಳು ಯಾವುದೂ ನನಗೆ ನೆನೆಪಿಲ್ಲ. ಯಾಕೆಂದರೆ ಅದು ಅವರು ಮಾಡಿಸಿದ್ದು. ಅವರೇ ಮಾಡಿದ್ದು ಎಂದೂ ಡೇನ್ಯುವಲ್‌ ಹೇಳಿದ್ದಾನೆ.
ಪೊಲೀಸರು ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...